ದಕ್ಷಿಣ ಕನ್ನಡ

ಉತ್ತರ ಕನ್ನಡ: 6 ನಾಮಪತ್ರ ಸಲ್ಲಿಕೆ

Published On :

ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 25
ಲೋಕಸಭಾ ಚುನಾವಣೆಯ ಉತ್ತರಕನ್ನಡ ಕ್ಷೇತ್ರಕ್ಕೆ ಮಂಗಳವಾರ ಒಟ್ಟೂ ಆರು ನಾಮಪತ್ರಗಳು ಸಲ್ಲಿಕೆಯಾಗಿವೆ. ಆಮ್ ಆದ್ಮಿ, ಸರ್ವ ಜನತಾ ಪಕ್ಷ ಹಾಗೂ ಬಹುಜನ ಮುಕ್ತಿ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಇಬ್ಬರು ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ರಾಘವೇಂದ್ರ ಠಾಣೆ, ಸರ್ವ ಜನತಾ ಪಕ್ಷದ ಇಲಿಯಾಸ್ ಕಾಟಿ ಹಾಗೂ ಪಕ್ಷೇತರರಾದ ಸದಾನಂದ ದೇಶಭಂಡಾರಿ ಮತ್ತು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಶೋಕ ಚಲವಾದಿ ಹಾಗೂ ಬಹುಜನ ಮುಕ್ತಿ ಪಕ್ಷದ ಓಲ್ವಿನ್ ಮಾರಿಯಾನ ಲೋಪಿಸ್ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಎಂ.ಟಿ. ರೇಜು ಅವರಿಗೆ ಸಲ್ಲಿಸಿದ್ದಾರೆ.
ಸಮಸ್ಯೆ ಪರಿಹರಿಸಲು ಪ್ರಯತ್ನ: ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಆಮ್ ಆದ್ಮಿ ಅಭ್ಯರ್ಥಿ ರಾಘವೇಂದ್ರ ಠಾಣೆ, ಉತ್ತರಕನ್ನಡ ಕ್ಷೇತ್ರದಲ್ಲಿ ಇದುವರೆಗೆ ಆರಿಸಿ ಬಂದ ಎಲ್ಲ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಆರ್.ವಿ. ದೇಶಪಾಂಡೆ, ಅನಂತಕುಮಾರ್ ಹೆಗಡೆ, ಶಿವಾನಂದ ನಾಯ್ಕ ಇವರೆಲ್ಲ ಒಂದಲ್ಲಾ ಒಂದು ಹಗರಣದಲ್ಲಿ ಸಿಲುಕಿ ಹಾಕಿಕೊಂಡವರು. ಆದರೆ ಈ ಬಾರಿ ಹೊಸದಾಗಿ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತಿರುವ ಆಮ್ ಆದ್ಮಿ ಸಾಮಾನ್ಯ ಜನರ ಆಶಿರ್ವಾದದ ಪಕ್ಷ. ಚುನಾವಣೆಗಾಗಿ ನಾವು ಒಂದು ರುಪಾಯಿಯನ್ನೂ ಖರ್ಚು ಮಾಡುತ್ತಿಲ್ಲ. ಎಲ್ಲವನ್ನು ಕಾರ್ಯಕರ್ತರು ಸ್ವ ಇಚ್ಛೆಯಿಂದ ಮಾಡುತ್ತಿದ್ದಾರೆ. ಸಂಪೂರ್ಣ ಪಾರದರ್ಶಕವಾಗಿರುವ ನಮ್ಮ ಪಕ್ಷವನ್ನು ಉತ್ತರಕನ್ನಡ ಕ್ಷೇತ್ರದ ಜನತೆ ಆರಿಸುವ ಭರವಸೆಯಿದೆ. ಒಂದು ವೇಳೆ ನಾವು ಸೋತರೆ ಕ್ಷೇತ್ರದಲ್ಲಿ ಭ್ರಷ್ಟತೆ ಇದೆ ಎಂದು ಅರ್ಥ ಎಂದರು. ದಲಿತ ಸಂಘರ್ಷ ಸಮಿತಿಯ ಪಕ್ಷೇತರ ಅಭ್ಯರ್ಥಿ ಅಶೋಕ ಚಲವಾದಿ, ಜಿಲ್ಲೆಯಲ್ಲಿ 6 ವಿಧಾನ ಸಭಾ ಕ್ಷೇತ್ರಗಳಿದ್ದರೂ ಒಂದು ಕ್ಷೇತ್ರದಲ್ಲಿಯೂ ದಲಿತರಿಗೆ ಮೀಸಲಿಡಲಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಹಿಂದುಳಿದವರು ಇನ್ನೂ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಹೀಗಾಗಿ ಈ ಬಾರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ದಲಿತರಾದ ತಾವು ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.