ದಕ್ಷಿಣ ಕನ್ನಡ

ಕುಕ್ಕೆ ದೇವಳ ಭೂ ಹಗರಣದಲ್ಲಿ ಸಚಿವ ಭಾಗಿ: ನಳಿನ್ ಆರೋಪ

Published On :

ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ದೇವಳದ ಜಾಗವನ್ನು ಖಾಸಗಿ ಟ್ರಸ್ಟ್ ಒಂದಕ್ಕೆ ನೀಡಿರುವ ಜಿಲ್ಲೆಯ ಸಚಿವರೊಬ್ಬರು ದೊಡ್ಡ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ. ಸುಬ್ರಹ್ಮಣ್ಯ ದೇವಳದ ಜಾಗವನ್ನು ಏಕಾಏಕಿ ಬದಲಿಸಿ ಟ್ರಸ್ಟ್‌ಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೊದಲು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ನಂತರ ಚರ್ಚೆಗೆ ಬರುವಂತೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಸವಾಲು ಹಾಕಿದ್ದಾರೆ.
 ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಸಂಬಂಧಪಟ್ಟ ಜಾಗವನ್ನು ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಸಮಿತಿ ಸಭೆ ತೀರ್ಮಾನದಂತೆ ಬನಶಂಕರಿ 6ನೇ ಹಂತ, 4ನೇ ಬ್ಲಾಕ್ ಸಿಎ ನಿವೇಶನ ಸಂಖ್ಯೆ 02 ಅನ್ನು ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಸಚಿವರೊಬ್ಬರು ಇದರಲ್ಲಿ ಶಾಮೀಲಾಗಿದ್ದಾರೆ. ಆದ್ದರಿಂದ ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
 ಕಳ್ಳಕಾಕರಿಗೆ ರಕ್ಷಣೆ ನೀಡುವ, ಉಗ್ರವಾದಕ್ಕೆ ಪ್ರಚೋದನೆ ನೀಡುವ, ಸಮಾಜ ವಿರೋಧಿ ಚಟುವಟಿಕೆಗೆ ಪ್ರೇರಣೆ ನೀಡುವ ಕಾಂಗ್ರೆಸ್ ಸರ್ಕಾರದ ದುರುದ್ದೇಶ ಜನರಿಗೆ ತಿಳಿದಿದೆ. ಇಂಥ ಸರ್ಕಾರವನ್ನು ತೊಲಗಿಸಿ, ನರೇಂದ್ರ ಮೋದಿ ಚಿಂತನೆಯ ಸರ್ಕಾರ ಅಸ್ತಿತ್ವಕ್ಕೆ ತರಬೇಕು ಎಂದ ನಳಿನ್, ಇದರ ಹಿಂದಿರುವ ಮೂಲಮಂತ್ರ 'ದೇಶ ಜಗದ್ಗುರು ಆಗಲು ನಮೋ ಪ್ರಧಾನಿಯಾಗಬೇಕು' ಎಂಬ ಜನರ ಆಶಯವಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.

ಕೇಂದ್ರ ಚುನಾವಣೆ ವೀಕ್ಷಕರು ಜಿಲ್ಲೆಗೆ
ಮಂಗಳೂರು: ಚುನಾವಣೆ ಪ್ರಕ್ರಿಯೆ ಕುರಿತು ನಿಗಾ ವಹಿಸಲು ಕೇಂದ್ರ ಚುನಾವಣೆ ಆಯೋಗದ ವೀಕ್ಷಕರು ಮಂಗಳೂರಿಗೆ ಆಗಮಿಸಿದ್ದಾರೆ. ಚುನಾವಣಾ ವೀಕ್ಷಕರಾಗಿ ಭಾಸ್ಕರ ಆತ್ಮಾರಾಂ ಸಾವಂತ್ ಆಗಮಿಸಿದ್ದಾರೆ. ಅವರ ದೂರವಾಣಿ 9481264971, ಇಮೇಲ್-generalobserver 17dk@gmail.com. ಸಾರ್ವಜನಿಕರು ಸಂಜೆ 6ರಿಂದ 7ರ ವರೆಗೆ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿ ಮಾಡಬಹುದು. ಪೊಲೀಸ್ ವೀಕ್ಷಕರಾಗಿ ಡಾ.ಎಂ.ರವಿ ಅವರನ್ನು 9481264935, ಇಮೇಲ್-policeobserver@gmail.comನಲ್ಲಿ ಸಂಪರ್ಕಿಸಬಹುದು. ಸಾರ್ವಜನಿಕರ ಭೇಟಿ ಸಮಯ ಬೆಳಗ್ಗೆ 10ರಿಂದ 11 ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.