ಸಚಿವ ಖಾದರ್ ಅಧಿಕಾರ ದುರಪಯೋಗ: ಜಯರಾಮ್
ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಜೂರಾದ ಭೂಮಿಯನ್ನು ರದ್ದುಗೊಳಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಸಂಬಂಧಿಕರ ಟ್ರಸ್ಟಿಗೆ ವರ್ಗಾಯಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ. ಜಯರಾಮ ಶೆಟ್ಟಿ ಟೀಕಿಸಿದ್ದಾರೆ. 2009ರಲ್ಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಂಜೂರಾದ ನಿವೇಶನವನ್ನು ರದ್ದುಗೊಳಿಸಿ, ಸಂಬಂಧಿಕರ ಟ್ರಸ್ಟಿಗೆ ವರ್ಗಾಯಿಸಿದ್ದಾರೆ. ಸಚಿವರಾದ ತಕ್ಷಣ ಖಾದರ್ರವರು ತನ್ನ ಸಹೋದರನಿಗೆ ರಾಜೀವ್ ಗಾಂಧಿ ಮೆಡಿಕಲ್ ಸೈಯನ್ಸ್ನಲ್ಲಿ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡುವಲ್ಲಿ ಸಫಲರಾಗಿದ್ದರು. ವಿಷಯ ಬಹಿರಂಗವಾದ ತಕ್ಷಣ ತನಗೇನು ಗೊತ್ತಿಲ್ಲ ಎಂದು ಜಾರಿಕೊಂಡರು. ಶಾಸಕರಿಗೆ ಸಿಗುವ ಬಿಡಿಎ ಜಿ-ಕೆಟಗರಿ ನಿವೇಶನವನ್ನು ಖಾದರ್ ಮತ್ತು ಅವರ ತಂದೆ ಮಾಜಿ ಶಾಸಕ ದಿ. ಯು.ಟಿ. ಫರೀದ್ರವರಿಗೆ ಸಿಕ್ಕಿದ್ದು, ಈ ಎರಡು ನಿವೇಶನ ಹೊರತುಪಡಿಸಿ ತನ್ನ ತಾಯಿಯ ಹೆಸರಿನಲ್ಲಿರುವ ಟ್ರಸ್ಟ್ಗೆ ಮತ್ತೊಂದು ಬಿಡಿಎ ನಿವೇಶನ ಮಂಜೂರು ಮಾಡುವಲ್ಲಿ ಅಧಿಕಾರ ದುರುಪಯೋಗ ಪಡಿಸಿದ ಸ್ವಾರ್ಥ ರಾಜಕಾರಣ ಮಾಡಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ದೇವಸ್ಥಾನಕ್ಕೆ ಮಂಜೂರಾದ ನಿವೇಶನವನ್ನು ಮರಳಿ ಒಪ್ಪಿಸಬೇಕು ಎಂದು ಸರ್ಕಾರವನ್ನು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

