ಸ್ವಾವಲಂಬಿ ಸಂತೆ'ಯಲ್ಲಿ ದೇಶೀಯ ಉತ್ಪನ್ನ
ಮಂಗಳೂರು: ಮನೆ ತೋಟದಲ್ಲಿ ರಾಸಾಯನಿಕ ಮುಕ್ತವಾಗಿ ಬೆಳೆದ ಬಾಳೆಕಾಯಿ, ತರಕಾರಿ, ದೇಶೀ ಹಸುವಿನ ತುಪ್ಪ, ಶುದ್ಧ ತೆಂಗಿನ ಎಣ್ಣೆ, ಮನೆಯಲ್ಲೇ ತಯಾರಿಸಿದ ಸಂಡಿಗೆ, ಹಪ್ಪಳ, ಉಪ್ಪಿನಕಾಯಿ, ತಂಪು ಪಾನೀಯ, ವಿವಿಧ ಬಗೆಯ ಸಿದ್ಧ ಉಡುಪು, ದೇವರ ಪೂಜೆಗೆ ಬೇಕಾದ ಪರಿಕರಗಳು, ಔಷಧೀಯ ಸಸ್ಯಗಳು...
ಹೀಗೆ ಹತ್ತುಹಲವು ದಿನನಿತ್ಯದ ಬಳಕೆ ವಸ್ತುಗಳು, ಆಹಾರ ವಸ್ತುಗಳ ಪ್ರದರ್ಶನಕ್ಕೆ ಸಾಕ್ಷಿಯಾದ್ದು ನಗರದ ಸಾಹಿತ್ಯ ಕೇಂದ್ರ ವಠಾರ.
ಕಾರ್ತಿಕ್ ಎಂಟರ್ ಪ್ರೈಸಸ್ ಮಾಲಕಿ ಸರಿತಾ ಪೈ ಹಾಗೂ ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಸ್ವಾವಲಂಬಿ ಸಂತೆ ಉದ್ಘಾಟಿಸಿದರು.
ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕಿ ಕೃಷ್ಣ ಕುಮಾರಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತ್ಯ ಕೇಂದ್ರ ಸಂಘಟಕ ರತ್ನಾಕರ ರಾವ್, ಭಾಸ್ಕರ ರೈ ಕುಕ್ಕುವಳ್ಳಿ ಮತ್ತಿತರರಿದ್ದರು.
ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಸಂತಸದ ವಿಚಾರ.
ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಂಡರೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬರಲು ಸಾಧ್ಯ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಸ್ವಾವಲಂಬಿ ಸಂತೆ ಮಾಡಬೇಕು ಎಂಬ ಅಭಿಪ್ರಾಯ ಉದ್ಘಾಟಕರಿಂದ ವ್ಯಕ್ತವಾಯಿತು.
ಕೃಷಿ ತೋಟಕ್ಕೆ ಬನ್ನಿ: 'ತಮಗೆ ಬೇಕಾದ ತರಕಾರಿಯನ್ನು ಮನೆಯಲ್ಲೇ ಬೆಳೆಯಬೇಕು. ದೇವಸ್ಥಾನಗಳಿಗೆ ಪ್ರವಾಸ ಹೋಗುವವರು ಕೃಷಿ ತೋಟಕ್ಕೆ ಬನ್ನಿ ಎಂದು ಆಹ್ವಾನವಿತ್ತವರು ಪ್ರಗತಿಪರ ಸಾವಯವ ಕೃಷಿಕ ಲೈನ್ಕಜೆ ರಾಮಚಂದ್ರ.
ಇವರು ಸಾವಯವದಲ್ಲಿ ಬೆಳೆಸಿದ ನೇರಳೆಹಣ್ಣು ಬೆಳಿಗ್ಗೆಯೇ ಖಾಲಿಯಾಗಿತ್ತು. ತೆಂಗಿನಕಾಯಿ, ಹಲಸಿನ ಕಾಯಿ, ಬಾಳೆದಿಂಡು, ಗೋಟುಕಾಯಿ, ನೆಕ್ಕರೆ, ಕಾಟು ಮಾವು ತಂದಿದ್ದರು. ಮಧ್ಯಾಹ್ನಕ್ಕೆ ಬಹುತೇಕ ಖಾಲಿಯಾಗಿತ್ತು.
ದೇಸಿ ಉತ್ಥಾನ ಎಸೋಸಿಯೇಟ್, ದುರ್ಗಾ ಮಹಿಳಾ ಗೃಹೋದ್ಯಮ ಉಪ್ಪಿನಂಗಡಿ, ಸತ್ವಂ ಆರ್ಗಾನಿಕ್, ಕಂಕನಾಡಿ ಶ್ಯಾಮಲಾ ಶೆಣೈ, ಅಶೋಕನಗರದ ರೇಖಾ ಸೇರಿದಂತೆ 40 ಮಂದಿ ಮಹಿಳೆಯರ ಗೃಹೋತ್ಪನ್ನಗಳ ಪ್ರದರ್ಶನ ಹಾಗೂ ಮರಾಟ ಏರ್ಪಟ್ಟಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

