ಘನತ್ಯಾಜ್ಯ ವಿಲೇವಾರಿಗೆ ಕಾಂಗ್ರೆಸಿಗರದ್ದೇ ವಿರೋಧ
ಮಂಗಳೂರು: ಮನೆ ಮನೆಯಿಂದ ಘನತ್ಯಾಜ್ಯ ನಿರ್ವಹಣೆ ಗುತ್ತಿಗೆ ಕಾರ್ಯಾದೇಶಕ್ಕೆ ಮಂಗಳವಾರ ಮೇಯರ್ ಕರೆದ ತುರ್ತು ಸಭೆ ಯಾವುದೇ ನಿರ್ಣಯ ಕೈಗೊಳ್ಳಲು ವಿಫಲವಾಗಿದೆ.
ಮುಂಬಯಿ ಮೂಲದ ಅ್ಯಂಟನಿ ಘನತ್ಯಾಜ್ಯ ವಿಲೇವಾರಿ ಸಂಸ್ಥೆಗೆ 2 ವರ್ಷದ ಹಿಂದೆಯೇ ಟೆಂಡರ್ ಆಗಿ, ಸರ್ಕಾರ ಆದೇಶವೂ ಬಂದಿತ್ತು. ಆದರೆ ಸ್ಥಳೀಯ ಗುತ್ತಿಗೆದಾರರ ಮತ್ತು ಜನಪ್ರತಿನಿಧಿಗಳ ಅಪವಿತ್ರ ಮೈತ್ರಿಯಿಂದಾಗಿ ಆದೇಶವನ್ನು 2 ವರ್ಷಗಳ ಕಾಲ ನೀಡಿರಲೇ ಇಲ್ಲ. ಈ ಘನತ್ಯಾಜ್ಯ ನಿರ್ವಹಣೆ ಕುರಿತು 6 ವರ್ಷದ ಹಿಂದೆಯೇ ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು.
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂಬುದನ್ನು ಮನಗಂಡು ನಗರ ಸುಂದರೀಕರಣ ಮತ್ತು ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಯಾದೇಶಗೊಳಿಸಲು ಮೇಯರ್ ಮಹಾಬಲ ಮಾರ್ಲ ಅವರು ಮಂಗಳವಾರ ತುರ್ತು ಸಭೆ ಕರೆದಿದ್ದರು.
ಗುತ್ತಿಗೆ ಸಂಸ್ಥೆಯ ಮುಖ್ಯಸ್ಥರು ಮುಂಬಯಿಯಲ್ಲಿ ಯಾವರೀತಿ ಘನತ್ಯಾಜ್ಯ ಸಂಗ್ರಹ ಮಾಡುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದರು. ಇದಕ್ಕಾಗಿಯೇ ವಿಶಿಷ್ಟ ಅತ್ಯಾಧುನಿಕ ವಾಹನಗಳ ವ್ಯವಸ್ಥೆಯನ್ನು ತೋರಿಸಿದ್ದರು.
ಆದರೆ ಕಾಂಗ್ರೆಸ್ ಪಕ್ಷದರೇ ಆದ ದೀಪಕ್ ಪೂಜಾರಿ, ನವೀನ್ ಡಿಸೋಜ, ಕದ್ರಿ ಅಶೋಕ್ ಕುಮಾರ್ ಡಿ.ಕೆ. ಅಪಸ್ವರ ಎತ್ತಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ವಿವರ ನೀಡಬೇಕು.
ಈ ಕುರಿತು ಸಂಪೂರ್ಣ ಮಾಹಿತಿ ಬೇಕು, ಎಲ್ಲರಿಗೂ ಲಿಖಿತ ಮಾಹಿತಿ ನೀಡಬೇಕು. ವರ್ಷಕ್ಕೆ 18 ಕೋಟಿ ಖರ್ಚು ಮಾಡುವ ಈ ಗುತ್ತಿಗೆ ಕುರಿತು ವಿಶೇಷ ಪಾಲಿಕೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸ್ಪಷ್ಟನೆ ನೀಡಿದ ಮೇಯರ್ ಮಹಾಬಲ ಮಾರ್ಲ, ಅತ್ಯಂತ ಪ್ರಮುಖ ಮತ್ತು ವಿಫಲ ಇಲಾಖೆ ಎಂದರೆ ಆರೋಗ್ಯ ಇಲಾಖೆ. ಘನತ್ಯಾಜ್ಯ ನಿರ್ವಹಣೆಯಲ್ಲಿ ಸದ್ಯಕ್ಕೆ ಶೇ.10 ಕಾಮಗಾರಿ ಆಗುತ್ತಿಲ್ಲ. ಜನರ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗ ತಡೆಯಲು ಮತ್ತು ನಗರ ಸುಂದರೀಕರಣಕ್ಕಾಗಿ ಗುತ್ತಿಗೆ ಅಂತಿಮ ಗೊಳಿಸಲು ಸಭೆ ಕರೆಯಲಾಗಿದೆ. ಚರ್ಚೆ ನಡೆಸಲು ಇದು ಪಾಲಿಕೆ ಅಧಿವೇಶನ ಅಲ್ಲ. ಈ ಹಿಂದಿನ ಮಹಾನಗರ ಪಾಲಿಕೆ ಸಭೆಯಲ್ಲಿ ಆದಾಯ ಮೂಲ, ಸಮಸ್ಯೆ, ಪರಿಹಾರ, ಮಾಹಿತಿ ಎಲ್ಲ ಸಭೆ ನಡೆದಿವೆ. ನಮ್ಮದು ನೂತನ ಪಾಲಿಕೆ ಆಡಳಿತ ಇರಬಹುದು. ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ನೀಡಿದೆ. ಕಾರ್ಯಾದೇಶ ನೀಡದೆ ಬಾಕಿ ಉಳಿದಿದೆ. ಮಂಗಳೂರಿಗೆ ಒಳ್ಳೆಯದಾಗಲಿ ಎಂಬ ಆಶಾವಾದದೊಂದಿಗೆ ಸಭೆ ಕರೆಯಲಾಗಿದೆ. ಸದಸ್ಯರಿಗೆ ಬೇಡ ಎಂದಾದರೇ ಬೇಡ ಎಂದು ನಮೂದಿಸೋಣ. ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಇಡೋಣ. ನಿಮ್ಮ ಅಭಿಪ್ರಾಯವನ್ನು ಬೆಂಗಳೂರಲ್ಲಿ ಈ ಕುರಿತು ನಡೆಯುವ ವಿಶೇಷ ಸಭೆಯಲ್ಲಿ ಹೇಳುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

