ದಕ್ಷಿಣ ಕನ್ನಡ

ಪೂರ್ತಿ ಮಾಸಾಶನ ಆದೇಶ ಪತ್ರದಲ್ಲಿ ಮಾತ್ರ!

Published On :

ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತೆಗೆ ರು. 3 ಸಾವಿರ ಮಾಸಾಶನ ನೀಡುವಂತೆ ಕಂದಾಯ ಇಲಾಖೆ ಹೊರಡಿಸಿದ ಆದೇಶ ಪತ್ರದಲ್ಲಿ ಮಾತ್ರ. ವಾಸ್ತವದಲ್ಲಿ ಸಂತ್ರಸ್ತೆಗೆ ರು. 700 ಕಡಿತಗೊಳಿಸಿ ಖಾತೆಗೆ ಜಮೆ ಮಾಡುತ್ತಿದೆ. ಈ ಬಗ್ಗೆ ವಿಚಾರಿಸಿದರೆ, ಅಧಿಕಾರಿಗಳು ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಪುತ್ತೂರಿನ ಪಾಣಾಜೆ ನಿವಾಸಿ, ಎಂಡೋ ಸಂತ್ರಸ್ತೆ ರಾಧಾವತಿಗೆ ಮಾಸಾಶನ ಪಡೆಯುವಲ್ಲಿ ವಂಚನೆಗೊಳಗಾದವರು.
ಆದೇಶದಲ್ಲೇನಿದೆ?: ಹುಟ್ಟಿನಿಂದಲೇ ಅಂಗವಿಕಲೆಯಾದ ರಾಧಾವತಿಗೆ ಅಂಗವಿಕಲ ಕಲ್ಯಾಣ ಇಲಾಖೆಯಿಂದ ಮಾಸಿಕ ರು. 500 ಪಿಂಚಣಿ ಬರುತ್ತಿತ್ತು. ಈಕೆ ಎಂಡೋ ಸಲ್ಫಾನ್ ಸಂತ್ರಸ್ತೆ ಪಟ್ಟಿಗೆ ಸೇರ್ಪಡೆಯಾದ ಬಳಿಕ ಎಲ್ಲರಂತೆ ಮಾಸಿಕ ರು. 3 ಸಾವಿರ ಮಾಸಾಶನ ಪಡೆಯುತ್ತಾರೆ ಎಂದು ಕಂದಾಯ ಇಲಾಖೆಯ ಆದೇಶ ಪತ್ರದಲ್ಲಿ ತಿಳಿಸಿತ್ತು.
ಫೆಬ್ರವರಿಯಿಂದ ಇವರ ಖಾತೆಗೆ ಕಂದಾಯ ಹಾಗೂ ಆರೋಗ್ಯ ಇಲಾಖೆಯಿಂದ ಪಿಂಚಣಿ ಪಾವತಿಸುತ್ತಿದೆ. ಕಂದಾಯ ಇಲಾಖೆ ರು. 500 ಮತ್ತು ಆರೋಗ್ಯ ಇಲಾಖೆ ರು. 1,800 ನೀಡುತ್ತಿದ್ದು, ಒಟ್ಟು ರು. 2,300 ಸಿಗುತ್ತಿದೆ. ಹಾಗಾದರೆ ಉಳಿದ ರು. 700 ಎಲ್ಲಿಗೆ ಹೋಯಿತು ಎಂಬುದಕ್ಕೆ ಎರಡು ಇಲಾಖೆಯಲ್ಲಿ ಉತ್ತರ ಇಲ್ಲ.
ಈಕೆಗೆ ಪುತ್ತೂರು ತಹಸೀಲ್ದಾರ್ ಮಂಜೂರಾತಿ ಆದೇಶ ಪತ್ರ ನೀಡಬೇಕಾದರೆ, ಅಂಗವಿಕಲ ಮಾಸಿಕ ವೇತನ ರು. 1,200 ಪಡೆಯುತ್ತಿದ್ದಾರೆ ಎಂದು ನಮೂದಿಸಿತ್ತು. ವಾಸ್ತವದಲ್ಲಿ ಈಕೆ ಪಡೆಯುತ್ತಿದ್ದುದು ಕೇವಲ ರು. 500 ಮಾತ್ರ. ಯಾಕೆಂದರೆ ಕಂದಾಯ ಇಲಾಖೆ ಶೇ.60 ಅಂಗವೈಕಲ್ಯ ಇದ್ದರೆ ಮಾಸಿಕ ರು. 500 ಮಾತ್ರ ನೀಡುತ್ತದೆ. ಹಾಗಾದರೆ ಆದೇಶ ಪತ್ರದಲ್ಲಿ ಇಲಾಖೆ ತಪ್ಪಾಗಿ ನಮೂದಿಸಿದೆಯೇ? ಅಥವಾ ಇವರಿಗೆ ಸಿಗಬೇಕಾದ ಮೊತ್ತದಲ್ಲಿ ಕಡಿತ ಮಾಡಿದ್ದರೇ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.
'ತನಗೆ ಪ್ರತಿ ತಿಂಗಳು ರು. 3 ಸಾವಿರ ಮಾಸಾಶನ ಸಿಗಬೇಕಿತ್ತು. ಆದರೆ ರು. 700 ಕಡಿತಗೊಳಿಸಿ ಖಾತೆಗೆ ಪಾವತಿಸುತ್ತಿದ್ದಾರೆ. ಇದನ್ನು ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರೂ ತನಗೆ ನ್ಯಾಯ ದೊರಕಿಲ್ಲ. ರು. 700 ಮೊತ್ತ ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ' ಎನ್ನುತ್ತಾರೆ ಸಂತ್ರಸ್ತೆ ರಾಧಾವತಿ. ರಾಧಾವತಿಗೆ ಸ್ವಂತ ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪತಿ ಸಂಜೀವ ಕೂಲಿ ಕೆಲಸ ಮಾಡುತ್ತಿದ್ದು, ಏಕೈಕ ಪುತ್ರಿ 10ನೇ ತರಗತಿ ಕಲಿಯುತ್ತಿದ್ದಾಳೆ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.