ದಕ್ಷಿಣ ಕನ್ನಡ

'ಕಾಸರಗೋಡು ಕರ್ನಾಟಕಕ್ಕೆ ಸೇರಿಸಬೇಕು'

Published On :

ಮಂಗಳೂರು: ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ, ರಾಜಕೀಯ ದುರುದ್ದೇಶದಿಂದ ಇದು ಕೇರಳ ಪಾಲಾಗಿದೆ. ಇದನ್ನು ಮತ್ತೆ ಕರ್ನಾಟಕಕ್ಕೆ ಸೇರಿಸುವ ಮೂಲಕ ಕಯ್ಯಾರ ಕಿಞಣ್ಣ ರೈಗಳ ಆಸೆ ಈಡೇರಿಸಬೇಕು ಎಂದು ಚಿಕ್ಕಮಗಳೂರು ಕರವೇ ಅಧ್ಯಕ್ಷ ತೇಗೂರು ಜಗದೀಶ್ ಹೇಳಿದರು.
ಎನ್‌ಜಿಒ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಕ್ಷಣೆ ವೇದಿಕೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಮೋಹನದಾಸ್ ರೈ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸಂಘಟನ ಬಲಪಡಿಸಬೇಕು. ರಾಜಕೀಯ ಮುಖಂಡರು ಜಿಲ್ಲೆ ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಜಿಲ್ಲಾ ಮುಖಂಡ ಮಜೀದ್ ಮಾತನಾಡಿ, ಬಂದರು ಪ್ರದೇಶದಲ್ಲಿ ಬಡವರ ಹಕ್ಕುಪತ್ರ ನಿವೇಶನ, ಆಸ್ತಿ ತೆರಿಗೆ ಸಹಿತ ಅನೇಕ ಸಮಸ್ಯೆಗಳಿವೆ. ಇದನ್ನು ಸಂಘಟನೆ ಕಾರ್ಯಕರ್ತರು ಪರಿಹರಿಸುವ ಮೂಲಕ ಜನರ ಸಮಸ್ಯೆ ಕೂಡಾ ಆಲಿಸಬೇಕು ಎಂದರು. ಖಾದರ್ ತಲಪಾಡಿ, ನಜೀರ್ ಹುಸೇನ್, ಬಶೀರ್ ಮುಲ್ಕಿ, ನೌಶಾದ್ ಬಂದರ್, ಅರುಣ್ ಕುಮಾರ್, ನೇತ್ರಾ ಸೂರಿಂಜೆ, ಜೆರಾಲ್ಡ್ ನಿಕೋನ್, ಮೌಸಿರ್ ಚಂದ್ರಶೇಖರ ಹೆಗಡೆ, ಇಸ್ಮಾಯಿಲ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.