ದಾವಣಗೆರೆ

ಮತಯಂತ್ರ ದೋಷ: ಫಲಿತಾಂಶ 5 ಗಂಟೆ ತಡವಾಗಿ ಪ್ರಕಟ

Published On :

ಕ.ಪ್ರ ವಾರ್ತೆ, ಚನ್ನಗಿರಿ, ಮಾ.11
ಪಪಂ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ 1ನೇ ವಾರ್ಡ್‌ನಲ್ಲಿ ಮತದಾನಗೊಂಡ ಮತಯಂತ್ರದ ದೋಷದಿಂದ 5 ಗಂಟೆಗಳ ತಡವಾಗಿ ಫಲಿತಾಂಶ ಪ್ರಕಟವಾಯಿತು.
ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಕಾರ್ಯ ಆರಂಭಗೊಂಡಿತ್ತಾದರೂ ಆರಂಭದ ಸುತ್ತಿನಲ್ಲಿ ಫಲಿತಾಂಶ ಬರಬೇಕಾಗಿದ್ದ 1ನೇ ವಾರ್ಡ್‌ನ ಮತಯಂತ್ರದ ಡಿಸ್‌ಪ್ಲೆನಲ್ಲಿ ಫಲಿತಾಂಶ ತೋರಿಸದೆ ಇದ್ದ ಕಾರಣ ಎಣಿಕೆ ಕೇಂದ್ರದ ಎಲ್ಲಾ ಸಿಬ್ಬಂದಿ ಬೇರೆ ಬ್ಯಾಟರಿಗಳನ್ನು ತಂದು ಪ್ರಯತ್ನಿಸಿದರೂ ಸರಿ ಹೋಗಲಿಲ್ಲ.
ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ ಯಂತ್ರವನ್ನು ದುರಸ್ಥಿಗೊಳಿಸಿ ಯಂತ್ರದಲ್ಲಿ ಅಡಗಿದ್ದ ಫಲಿತಾಂಶವನ್ನು ಹೊರ ತೆಗೆಯಲು ಹರ ಸಾಹಸಪಟ್ಟು ಹೊರತೆಗೆದರು.
1ನೇ ವಾರ್ಡ್‌ನ ಫಲಿತಾಂಶದ ಪ್ರಕಟಣೆ ವಿಳಂಬವಾದ ಕಾರಣದಿಂದ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮಾ ಜೆ.ಪಟೇಲ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೊದಿಗೆರೆ ರಮೇಶ್ ಎಣಿಕೆಯ ಕೇಂದ್ರಕ್ಕೆ ಬಂದು ವಿವರಣೆ ಪಡೆದು ಯಂತ್ರ ದುರಸ್ಥಿಯಾಗದೆ ಇದ್ದರೆ ಮುಂದೇನು ಎಂದು ತಹಸಿಲ್ದಾರರ ಬಳಿ ಚರ್ಚೆ ನಡೆಸುತ್ತಿರುವಾಗಲೇ ಯಂತ್ರದ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಎಂಜಿನಿಯರ್ ಮತಯಂತ್ರ ಸರಿಯಾಗಿದೆ ಎಂದು ತಿಳಿಸಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಫಲಿತಾಂಶದ ವಿವರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.