ದಾವಣಗೆರೆ

ಹರಿಹರ ನಗರಸಭೆ: ಅತಂತ್ರ

Published On :

ಹರಿಹರ: ನಗರಸಭೆಯ 31 ವಾರ್ಡ್‌ಗಳ ಪಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ 13, ಜೆಡಿಎಸ್ 10, ಕೆಜೆಪಿ 4, ಬಿಜೆಪಿ 1 ಹಾಗೂ 3 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ.
 ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ 20 ಸದಸ್ಯರನ್ನು ಆಯ್ಕೆ ಮಾಡಿ ಸ್ಪಷ್ಟ ಬಹುಮತ ನೀಡಿದ್ದ ನಗರದ ಮತದಾರ ಈ ಬಾರಿ ಕಾಂಗ್ರೆಸ್ ಕಡೆ ವಾಲಿದ್ದಾನೆ. 13 ಜನ ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸಿದರೂ ಬಹುಮತ ಗಳಿಸಲು ಇನ್ನು 3 ಸದಸ್ಯರ ಅವಶ್ಯಕತೆ ಇದೆ. ಇತ್ತೀಚೆಗೆ ಉದಯವಾದ ಕೆಜೆಪಿ ಪಕ್ಷದ 4 ಸದಸ್ಯರನ್ನು ಗೆಲ್ಲಿಸಿರುವ ಮತದಾರ ಬಿಜೆಪಿಗೆ ಕಳೆದ ಬಾರಿಯಂತೆ ಒರ್ವ ಸದಸ್ಯರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಉಳಿದಂತೆ ಜೆಡಿಎಸ್ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಹಾಗೂ ಜೆಡಿಎಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಓರ್ವ ಸದಸ್ಯರಿಗೆ ಮತದಾರರು ಮಣೆ ಹಾಕಿದ್ದಾರೆ.
 ಕೊನೆಯ ಅವಧಿಗೆ ನಗರಸಭಾ ಅಧ್ಯಕ್ಷರಾಗಿಸಿದ್ದ ವಿಶ್ವನಾಥ ಭೂತೆ ಅವರನ್ನು ಅವರದೇ ಪಕ್ಷದಿಂದ ಟಿಕೆಟ್ ವಂಚಿತರಾಗಿ ಸ್ಪರ್ಧಿಸಿದ್ದ ಎಂ.ಎನ್. ನಾಗರಾಜ್ ಸೋಲಿಸಿದ್ದಾರೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಬಿ.ಆರ್. ಸುರೇಶ್ ಹೊನ್ನಮ್ಮ ಕೊಂಡಜ್ಜಿ, ಎಚ್. ಅಬ್ದುಲ್ ರೆಹೆಮಾನ್ ಖಾನ್ ಅವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಜೆಡಿಎಸ್ ಹಿರಿಯ ಸದಸ್ಯ ಡಿ. ಹೇಮಂತರಾಜ್, ಮಾಜಿ ಸದಸ್ಯ ಗಜಾನನ ಧಲಭಂಜನ್, ಡಿ.ವೈ. ಇಂದಿರಾ, ಶೀಲಾ ಕೊಟ್ರೆಶ್, ನೈಮುನ್ನಿಸಾ, ಹಾಜಿ ಅಲಿಖಾನ್, ಮೀರಾಭಟ್ ಸೇರಿದಂತೆ ಇತರರು ತೀವ್ರ ಮುಖ ಭಂಗ ಅನುಭವಿಸಿದ್ದಾರೆ.
ವಿಜೇತ ಅಭ್ಯರ್ಥಿಗಳು
ವಾರ್ಡ್ -1 - ಪಿ.ಎನ್. ವಿರೂಪಾಕ್ಷ (ಜೆಡಿಎಸ್), ವಾರ್ಡ್-2 ನಾಗರಾಜ ಎಂ. ರೋಖಡೆ ಕೆಜೆಪಿ, ವಾರ್ಡ್ - 3 ಡಿ.ಜಿ. ರಘುನಾಥ ಪಕ್ಷೇತರ, ವಾರ್ಡ್ - 4 ಕೆ. ಮರಿದೇವ ಜೆಡಿಎಸ್, ವಾರ್ಡ್ - 5 ಬಿ.ಕೆ. ಸೈಯದ್ ರೆಹಮಾನ್ ಕೆಜೆಪಿ, ವಾರ್ಡ್ - 6 ಗಂಗಮ್ಮ ಕೋಡಿಹಳ್ಳಿ ಜೆಡಿಎಸ್, ವಾರ್ಡ್- 7 ಪರ್ವಿನ್‌ಭಾನು ಶಫೀವುಲ್ಲಾ ಕಾಂಗ್ರೆಸ್, ವಾರ್ಡ್ -8 ನಿಂಬಕ್ಕ ಚಂದಾಪೂರ ಕೆಜೆಪಿ, ವಾರ್ಡ್ -9 ಗುಲ್ನಾಜ್ ಭಾನು ಜೆಡಿಎಸ್, ವಾರ್ಡ್ -10 ಹಬೀಬ್ ಉಲ್ಲಾ ಜೆಡಿಎಸ್, ವಾರ್ಡ್ -11 ರತ್ನಮ್ಮ ಮರಿಯಪ್ಪ ಕಾಂಗ್ರೆಸ್, ವಾರ್ಡ್ -12 ಬಿ. ರೇವಣಸಿದ್ದಪ್ಪ ಕಾಂಗ್ರೆಸ್, ವಾರ್ಡ್ -13 ಆಶಾ ಮರಿಯೋಜಿರಾವ್ ಕಾಂಗ್ರೆಸ್, ವಾರ್ಡ್-14 ಪ್ರತಿಭಾ ಪ್ರಕಾಶ್ ಪಕ್ಷೇತರ, ವಾರ್ಡ್ -15 ಎಂ. ಅತಾವುಲ್ಲಾ ಜೆಡಿಎಸ್, ವಾರ್ಡ್ -16 ಶಂಕರ್ ಖಟಾವ್ಕರ್ ಕಾಂಗ್ರೆಸ್, ವಾರ್ಡ್ -17 ನಗೀನಾ ಸುಬಾನಸಾಬ್ ಜೆಡಿಎಸ್, ವಾರ್ಡ್ -18 ಜಿ. ಸುರೇಶಗೌಡ, ಕಾಂಗ್ರೆಸ್, ವಾರ್ಡ್ -19 ಶಹಜಾದ್ ಸನಾವುಲ್ಲಾ ಕಾಂಗ್ರೆಸ್, ವಾರ್ಡ್ -20 ಮಂಜುಳಾ ಅಜ್ಜಯ್ಯ ಬಿಜೆಪಿ, ವಾರ್ಡ್ -21 ಅಂಬುಜಾ ಬಾಯಿ ಕೆಜೆಪಿ, ವಾರ್ಡ್ -22 ಬಿ. ಅಲ್ತಾಫ್ ಕಾಂಗ್ರೆಸ್, ವಾರ್ಡ್ -23 ಹಜರತ್ ಅಲಿ ಕಾಂಗ್ರೆಸ್, ವಾರ್ಡ್ -24 ಸೈಯದ್ ಏಜಾಜ್ ಕಾಂಗ್ರೆಸ್, ವಾರ್ಡ್ -25 ಬಿ. ಮಹಮದ್ ಸಿಗ್ಬತ್‌ಉಲ್ಲಾ ಕಾಂಗ್ರೆಸ್, ವಾರ್ಡ್ -26 ಎ. ವಾಮನಮೂರ್ತಿ ಜೆಡಿಎಸ್, ವಾರ್ಡ್ -27 ಡಿ. ಉಜ್ಜೇಶ್ ಜೆಡಿಎಸ್, ವಾರ್ಡ್ -28 ಎಸ್.ಎಂ. ವಸಂತ ಕಾಂಗ್ರೆಸ್, ವಾರ್ಡ್ -29 ಸೈಯದ್ ಜಹೀರ್ ಅಲ್ತಮಷ್ ಕಾಂಗ್ರೆಸ್, ವಾರ್ಡ್ -30 ಎಂ.ಎನ್. ನಾಗರಾಜ (ನಲ್ಲಿ) ಪಕ್ಷೇತರ, ವಾರ್ಡ್ -31 ಅಂಜಿನಮ್ಮ ಜೆಡಿಎಸ್, ಜಯಗಳಿಸಿರುವುದಾಗಿ ಚುನಾವಣಾಧಿಕಾರಿ ಜಿ. ನಜ್ನಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.