ಧಾರವಾಡ

ಹುಬ್ಬಳ್ಳಿ: ಮನೆ ಕೀಲಿ ಮುರಿದು ಹಣ ದೋಚಿದ ಕಳ್ಳರು

Published On :

ಹುಬ್ಬಳ್ಳಿ: ನಾಲ್ಕು ಮನೆಗಳ ಕೀಲಿ ಮುರಿದ ಕಳ್ಳರು, 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹಳೇಹುಬ್ಬಳ್ಳಿ ಅರವಿಂದ ನಗರದ ಜನತಾ ಪ್ಲಾಟ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ. ಹನುಮಂತ ಇಟಗಿ ಎಂಬುವವರ ಮನೆಯಲ್ಲಿ ಸುಮಾರು 40 ಸಾವಿರ ನಗದು ಹಾಗೂ 5 ತೊಲೆ ಚಿನ್ನಾಭರಣ, ಗಣಪತಸಾ ಶಾಲಗಾರ ಮನೆಯಲ್ಲಿ 20 ಸಾವಿರ ನಗದು ಹಾಗೂ ಒಂದೂವರೆ ತೊಲೆ ಚಿನ್ನಾಭರಣ, ದೇವಪ್ಪ ಚಲವಾದಿ ಎಂಬುವವರ ಮನೆಯಲ್ಲಿ 21 ಸಾವಿರ ನಗದು ಹಾಗೂ ಪಕ್ಕದ ಮತ್ತೊಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.  ಅಕ್ಕಪಕ್ಕದ ಮನೆಗಳಲ್ಲಿನವರು ಮನೆಗೆ ಬೀಗ ಜಡಿದು ಪರಸ್ಥಳಕ್ಕೆ ತೆರಳಿದ್ದನ್ನು ಗಮನಿಸಿದ ಕಳ್ಳರು, ಮನೆಗಳ ಬೀಗ ಮುರಿದು ಒಳನುಗ್ಗಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.