ಇಂದು-ನಾಳೆ ನಾಗರ ಪಂಚಮಿ
ಧಾರವಾಡ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಧಾರವಾಡ ನಗರ, ಗ್ರಾಮೀಣ ಪ್ರದೇಶದಲ್ಲಿ ನಾಗರ ಪಂಚಮಿ ಹಬ್ಬದಾಚರಣೆಗೆ ಜನತೆ ಸಿದ್ಧರಾಗಿದ್ದಾರೆ.
ಕೆಲವು ಕಡೆ ಭಾನುವಾರ, ಇನ್ನೂ ಕೆಲವೆಡೆ ಸೋಮವಾರ ಹಬ್ಬದಾಚರಣೆ ನಡೆಯಲಿದೆ. ಈ ದಿನ ಅರಶಿನ ಮತ್ತು ರಕ್ತಚಂದನದಿಂದ ಮನೆಯ ಮೇಲೆ ನವನಾಗರ ಆಕೃತಿ ಬಿಡಿಸಿ ಅಥವಾ ಮಣ್ಣಿನ ಮೂರ್ತಿ ಕೂರಿಸಿ ಪೂಜೆ ಮಾಡಿ ಹಾಲು ಮತ್ತು ಅರಳಿನ ನೈವೇದ್ಯ ಮಾಡುವುದು ಪದ್ಧತಿ. ಮಹಿಳೆಯರು ಹಾಗೂ ಮಕ್ಕಳಿಗಂತೂ ನಾಗರ ಪಂಚಮಿ ಹಬ್ಬವೆಂದರೆ ಎಲ್ಲಿಲ್ಲದ ಖುಷಿ.
ಮನೆ ಬಳಿಯ ಹುಣಸೆ, ಬೇವಿನ ಮರಕ್ಕೆ ಜೋಕಾಲಿ ಕಟ್ಟಿ ಆಟವಾಡುವುದು, ಇಷ್ಟದ ಉಂಡಿಗಳನ್ನು ತಿನ್ನುತ್ತಾ ನಾಗರ ಪಂಚಮಿ ಹಬ್ಬದಾಚರಣೆಗೆ ಕ್ಷಣಗಣನೆ ನಡೆದಿದೆ.
ಶೇಂಗಾ, ರವೆ, ಬುಂದಿ, ಬೇಸನ್, ಖಾರದಾನಿ, ಗುಳ್ಳಡಕಿ ಸೇರಿದಂತೆ ತರಹೇವಾರಿ ಉಂಡಿಗಳನ್ನು ಈ ಹಿಂದೆ ಮನೆಯಲ್ಲಿಯೇ ಸಿದ್ಧಪಡಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉಂಡಿಗಳು ಸಹ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹತ್ತಾರು ರೀತಿಯ ಉಂಡಿ ಗಳು ಮಾರಾಟವಾಗುತ್ತಿವೆ. ನಾಗರ ಪಂಚಮಿ ಎಂದರೆ ಸಾತ್ವಿಕತೆ ಗ್ರಹಿಸುವ ಕಾಲ.
ನಾಗಗಳಲ್ಲಿ ಶ್ರೇಷ್ಠನಾದ ಅನಂತನೇ ನಾನು ಎಂದು ಶ್ರೀಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳಿದ್ದಾನೆ. ಕಾಳಿಂಗ ಸರ್ಪದ ಮರ್ದನವಾದ ದಿನವೇ ಶ್ರಾವಣ ಶುಕ್ಲ ಪಂಚಮಿ. ಜನಮೇಜಯ ರಾಜನು ಆಸ್ತಿಕ ಋಷಿಗೆ ನೀಡಿದ ವರದಂತೆ ಸರ್ವಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು. ಹಾಗಾಗಿ ನಾಗರ ಪಂಚಮಿಯನ್ನು ಪಂಚಮಿ ಎಂದು ಆಚರಿಸಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಈ ಹಬ್ಬದಿಂದ ಜಗತ್ತಿನಲ್ಲಿರುವ ಎಲ್ಲ ಜೀವಿಗಳೂ ಜಗತ್ತಿನ ಎಲ್ಲ ಕಾರ್ಯಗಳಿಗೂ ಪೂರಕ. ಅವುಗಳ ಪೂಜೆ ಮಾಡುವುದರಿಂದ ಭಗವಂತನು ಅವುಗಳ ಮಾಧ್ಯಮದಿಂದ ಕಾರ್ಯ ಮಾಡುತ್ತಿದ್ದಾನೆ ಎಂಬ ವಿಶಾಲ ದೃಷ್ಟಿಕೋನವು ಸಿಗುತ್ತದೆ ಎಂಬುದು ಪ್ರತೀತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

