ಬಹುಭಾಷಾ ಉಚಿತ ಚಲನಚಿತ್ರೋತ್ಸವ...
ಧಾರವಾಡ ಉತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಖ್ಯಾತನಾಮ ನಿರ್ದೇಶಕರ ವಿವಿಧ ಭಾಷಿಕ ಪ್ರಶಸ್ತಿ ವಿಜೇತ ಚಲನಚಿತ್ರಗಳ ಉಚಿತ ಪ್ರದರ್ಶನಕ್ಕೆ ಜಿಲ್ಲಾ ಉತ್ಸವ ಸಮಿತಿ ವ್ಯವಸ್ಥೆ ಮಾಡಿದೆ.
ಹುಬ್ಬಳ್ಳಿಯ ಸ್ಟೇಶನ್ ರಸ್ತೆಯಲ್ಲಿರುವ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಿತ್ಯ ಮಧ್ಯಾಹ್ನ 12, 3 ಹಾಗೂ 6 ಗಂಟೆಗೆ ಒಂದರಂತೆ ಒಟ್ಟು ಒಂಬತ್ತು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಧಾರವಾಡದಲ್ಲಿ ಡಿ. 14 ಹಾಗೂ 15ರಂದು ಸೃಜನಾ ರಂಗಮಂದಿರದಲ್ಲಿ ಮೂರು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಹುಬ್ಬಳ್ಳಿಯ ಮಹಾಂತೇಶ ಲಲಿತಕಲಾ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಚಿತ್ರೋತ್ಸವದ ಉದ್ಘಾಟನೆ ಇದ್ದು, ಮಧ್ಯಾಹ್ನ 12ಕ್ಕೆ ಗುರುದತ್ ನಿರ್ದೇಶನದ ಹಿಂದಿ ಚಿತ್ರ ಚೌದವೀಕಾ ಚಾಂದ್, 3ಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನ್ನಡ ಚಿತ್ರ ಗುಲಾಬಿ ಟಾಕೀಸ್ ಹಾಗೂ ಸಂಜೆ 6ಕ್ಕೆ ಪರೇಶ ಮೊಕಾಶಿ ನಿರ್ದೇಶನದ ಮರಾಠಿ ಚಿತ್ರ ಹರಿಶ್ಚಂದ್ರಾಚಿ ಫ್ಯಾಕ್ಟರಿ ಪ್ರದರ್ಶನಗೊಳ್ಳಲಿವೆ.
ಉತ್ಸವದ 2ನೇ ದಿನ ಡಿ. 14ರಂದು ಧಾರವಾಡದ ಸೃಜನಾ ರಂಗ ಮಂದಿರದಲ್ಲಿ ಬೆಳಗ್ಗೆ 11ಕ್ಕೆ ಉದ್ಘಾಟನೆ, 12ಕ್ಕೆ ಗಿರೀಶ ಕಾರ್ನಾಡ್ ನಿರ್ದೇಶನದ ಕಾಡು ಹಾಗೂ ಮಧ್ಯಾಹ್ನ 3ಕ್ಕೆ ಅಬ್ರಾರಅಲ್ಟಿ ನಿರ್ದೇಶನದ ಸಾಹಿಬ, ಬೀಬಿ ಔರ್ ಗುಲಾಮ ಹಿಂದಿ ಚಿತ್ರ ಪ್ರದರ್ಶನಗೊಳ್ಳಲಿವೆ. ಅಂದು ಹುಬ್ಬಳ್ಳಿಯಲ್ಲಿ ಮಧ್ಯಾಹ್ನ 12ಕ್ಕೆ ಕೆ. ವಿಶ್ವನಾಥ ನಿರ್ದೇಶನದ ತೆಲಗು ಚಿತ್ರ ಶಂಕರಾಭರಣಂ , 3ಕ್ಕೆ ಸುರೇಶ ಹೆಬ್ಳಿಕರ್ ನಿರ್ದೇಶನದ ಕಾಡಿನ ಬೆಂಕಿ ಹಾಗೂ ಸಂಜೆ 6ಕ್ಕೆ ಶ್ಯಾಂಬೆನೆಗಲ್ ನಿರ್ದೇಶನದ ಭೂಮಿಕಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಡಿ. 15ರಂದು ಧಾರವಾಡದಲ್ಲಿ ಮಧ್ಯಾಹ್ನ 3ಕ್ಕೆ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ನಾಯಗನ್, ಹುಬ್ಬಳ್ಳಿಯಲ್ಲಿ 12ಕ್ಕೆ ಬಿ. ಬಿ. ಕಾರಂತ ನಿರ್ದೇಶನದ ಚೋಮನ ದುಡಿ, 3ಕ್ಕೆ ಸತ್ಯಜಿತ್ ನಿರ್ದೇಶನದ ಹಿಂದಿ ಚಿತ್ರ ಶತರಂಜ್ಕೆ ಖಿಲಾಡಿ, 6ಕ್ಕೆ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ಕಣ್ಣತ್ತಿಲ್ ಮುಠಾಮಿತ್ತಲ್ ಪ್ರದರ್ಶನಗೊಳ್ಳಲಿವೆ.
ಭಾರತೀಯ ಚಲನಚಿತ್ರ ರಂಗ ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಉತ್ಸವ ಜರುಗುತ್ತಿರುವುದು ವಿಶೇಷ. ಈ ಉತ್ಸವ ಕಾಲಕ್ಕೆ ಅವಳಿ ನಗರಗಳಲ್ಲಿ ಚಲನ ಚಿತ್ರೋತ್ಸವ ಏರ್ಪಡಿಸಿರುವುದು ವಿಶೇಷ. ಆಸಕ್ತರು ಈ ಚಿತ್ರಗಳ ವೀಕ್ಷಿಸಬೇಕೆಂದು ಧಾರವಾಡ ಜಿಲ್ಲಾ ಉತ್ಸವ ಸಮಿತಿ ವಿನಂತಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

