ಧಾರವಾಡ

ಅಂಧರ ಬಾಳಿಗೆ ಬೆಳಕಾಗಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 30
ಮಧುಮೇಹ ಎಲ್ಲರನ್ನೂ ಕಂಗೆಡಿಸುತ್ತಿದೆ. ಈ ರೋಗದಿಂದಾಗಿ ಗ್ಲೂಕೋಮಾ ಸೇರಿದಂತೆ ಕಣ್ಣಿಗೆ ಹಲವಾರು ತೊಂದರೆಗಳಾಗುತ್ತಿವೆ. ಆದ್ದರಿಂದ ಎಲ್ಲರೂ ನೇತ್ರಗಳನ್ನು ನಿರಂತರವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಾಸನ್ ಐ ಕೇರ್ ಆಸ್ಪತ್ರೆ ಸಂಯೋಜಕ ಸೋಮಶೇಖರ ಗಣಿ ಹೇಳಿದರು.
ತಾಲೂಕಿನ ಗರಗ ಗ್ರಾಮದ ಸುವರ್ಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯಲದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ವಾಸನ್ ಐ ಕೇರ್ ಆಸ್ಪತ್ರೆ ವತಿಯಿಂದ ಶನಿವಾರ ನಡೆದ ಉಚಿತ ನೇತ್ರ ತಪಾಸಣೆಯಲ್ಲಿ ಮಾತನಾಡಿದರು. ನೇತ್ರದಾನ ಮಹಾದಾನ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನೇತ್ರ ದಾನ ಮಾಡುವವರ ಸಂಖ್ಯೆ ವಿರಳವಾಗಿದೆ. ನಾವು ದಾನ ಮಾಡುವ ಎರಡು ಕಣ್ಣುಗಳಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಬಹುದು. ಆದ್ದರಿಂದ ಎಲ್ಲರೂ ತಮ್ಮ ಕಣ್ಣುಗಳು ದಾನ ಮಾಡಬೇಕು ಎಂದು ಹೇಳಿದರು.
ಸುವರ್ಣ ಎಜ್ಯುಕೇಷನಲ್ ಟ್ರಸ್ಟ್‌ನ ಕಾರ್ಯದರ್ಶಿ ಸವಿತಾ ಅಮರಶೆಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಗ್ರಾಮದ ಜನರಿಗೆ ತಿಳಿವಳಿಕೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಗರಗ ಗ್ರಾಪಂ ಅಧ್ಯಕ್ಷೆ ಪಾರ್ವತಿ ಉಳ್ಳವಣ್ಣವರ ಮತ್ತು ಸುವರ್ಣ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಜೋಗಿನ್ ಮಾತನಾಡಿದರು. ಮಂಜುಳಾ ಗಡ್ಡನವರ, ಜುಲ್ಫಿಕರ ಖಾಜಿ, ಷಣ್ಮುಖ ಅಂಗಡಿ, ಗಂಗಾಧರ ಮರಳಹಳ್ಳಿ, ರಾಘವೇಂದ್ರ ಪಟಗೆ, ಶ್ವೇತಾ ಮುತ್ತಗಿ, ಗುರುರಾಜ ಲಾಳಸಂಗಿ, ಶಿವಾನಂದ ದೊಡಮನಿ, ವರ್ಧಮಾನ ಹಮ್ಮಿಗಿ, ಸದ್ದಾಮ್, ಸುಲ್ತಾನ್ ಬೆಟಗೇರಿ, ಶರೀಫ್ ಮುಂತಾದವರು ಇದ್ದರು. ಮುತ್ತಪ್ಪ ಡುಮ್ಮಣ್ಣವರ ನಿರೂಪಿಸಿದರು. ಉಪನ್ಯಾಸಕ ಮಂಜುನಾಥ ಅಡಿಗಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.