ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಧಾರವಾಡ: ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪ್ರಶಸ್ತಿ ಹಾಗೂ ವ್ಯಕ್ತಿಗಳಿಗಾಗಿ ನೀಡುವ ರಾಜೀವ ಗಾಂಧಿ ಮಾನವ ಸೇವಾ ಪ್ರಶಸ್ತಿಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿಗಳನ್ನು ಫೆ. 20 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಮ್ಮನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (0836-2447850) ಧಾರವಾಡ ಕಚೇರಿಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಬಿಎಸ್ವೈ ಭೇಟಿ
ಕಲಘಟಗಿ: ತಾಲೂಕಿನ ರಾಮನಾಳದಲ್ಲಿ ಪುಣ್ಯಕೋಟಿ ಮಠದ ಸ್ಥಾಪನೆಗಾಗಿ ಶ್ರೀ ಜಗದೀಶ್ವರ ಸ್ವಾಮೀಜಿಗಳು ಕೈಗೊಂಡಿರುವ 21 ದಿನಗಳ ಕಠೋರ ತಪೋನುಷ್ಠಾನದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಆಶೀರ್ವಾದ ಪಡೆದರು. ರಾಮನಾಳ ಗ್ರಾಮದಲ್ಲಿ ಹಾವೇರಿ ಜಿಲ್ಲೆಯ ಕುಮಾರಪಟ್ಟಣಂ ಭೂ ಕೈಲಾಸ ತಪೋಕ್ಷೇತ್ರದ ಬಾಲಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು 21 ದಿನದ ಕಠೋರ ತಪೋನುಷ್ಠಾನ ಕೈಗೊಂಡಿದ್ದು, ಪ್ರತಿನಿತ್ಯ ಸಂಜೆ ಕುರಬಗೊಂಡದ ವೇದಮೂರ್ತಿ ಶ್ರೀ ಪಂಚಾಕ್ಷರಿ ಶಾಸ್ತ್ರೀಗಳು ಪ್ರವಚನ ನೆಡೆಸುತ್ತಿದ್ದಾರೆ. ತಾಲೂಕಿನ ಭಕ್ತರ ವಿನಂತಿಗೆ ಓಗೊಟ್ಟು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ರಾಮನಾಳ ಗ್ರಾಮಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಸಿ.ಎಂ ನಿಂಬಣ್ಣವರ, ಗೀತಾ ಮರಲಿಂಗಣ್ಣವರ, ಅಶೋಕ ಕಾಟವೆ, ನಿಜನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಿವಲಿಂಗಪ್ಪ ಮಡಿವಾಳರ, ಪಿ.ಎಂ ಚಿಕ್ಕಮಠ, ಚನ್ನಯ್ಯ ಹಂಚಿಮನಿ, ಮುದಕಪ್ಪ ಅದರಗುಂಚಿ, ಗಂಗಯ್ಯ ಚಿಕ್ಕಮಠ, ಫಕ್ಕೀರಪ್ಪ ಗೌಳಿ, ರಾಮಣ್ಣ ಇಂಗೋಲಿ ಉಪಸ್ಥಿತರಿದ್ದರು.
ಇಂದಿನಿಂದ ಕಾರ್ಯಾಗಾರ
ಧಾರವಾಡ: ಉಚ್ಚಮಟ್ಟದ ವ್ಯವಸಾಯಿಕ ಶಿಕ್ಷಣದಲ್ಲಿ ನವೀಕರಣತೆ ಮತ್ತು ಪರಿವರ್ತನೆ ವಿಷಯದ ಮೇಲೆ ಇಲ್ಲಿನ ಎಸ್ಡಿಎಂ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಫೆ. 8 ಹಾಗೂ 9ರಂದು ಕಾರ್ಯಗಾರ ಆಯೋಜಿಸಲಾಗಿದೆ. ಎಸ್.ಡಿ.ಎಂ. ಸೊಸೈಟಿಯ ಎಲ್ಲಾ ವಿದ್ಯಾ ಸಂಸ್ಥೆಗಳ ಉಪನ್ಯಾಸಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಜೀವನದಲ್ಲಿ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗಾಮನಗಟ್ಟಿಯ ದೇಸಾಯಿ ಓಣಿ ನಿವಾಸಿ ಕರಿಯಪ್ಪ ಹನುಮಂತಪ್ಪ ಶಿವಣ್ಣವರ (26) ಎಂಬುವನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹೊಟ್ಟೆ ನೋವು ಸೇರಿದಂತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ ಕರಿಯಪ್ಪ, ಬುಧವಾರ ರಾತ್ರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ನವನಗರ ಠಾಣೆ ಇನ್ಸ್ಪೆಕ್ಟರ್ ಎಚ್.ಡಿ. ಕುಲಕರ್ಣಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಾವು: ಕ್ಷಯ ರೋಗದಿಂದ ಬಳಲುತ್ತಿದ್ದ ಅಂದಾಜು 30 ವರ್ಷದ ಯುವಕನೊಬ್ಬ ಉಪಚಾರ ಫಲಿಸದೇ ಮೃತಪಟ್ಟಿದ್ದಾನೆ. ಪಾಲಿಕೆ ಉದ್ಯಾನವನದಲ್ಲಿ ಕಾಯಿಲೆಯಿಂದ ಬಳುತ್ತಿದ್ದ ಈತನನ್ನು ಅಬ್ದುಲ್ಸಾಬ್ ಎಂಬುವರು ಪೊಲೀಸರ ಸಹಾಯದಿಂದ ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಿದ್ದರು. ಆದರೆ, ಉಪಚಾರ ಫಲಿಸದೇ ಬುಧವಾರ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಉಪನಗರ ಠಾಣೆ ದೂ. ಸಂ. (0836) 2233517 ಅಥವಾ ಸಿಟಿ ಕಂಟ್ರೋಲ್ ರೂಂ ದೂ. ಸಂ. 2233555ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಹುಬ್ಬಳ್ಳಿ: ಮುಳಗುಂದಕ್ಕೆ ಹೋಗಿ ಬರುವುದಾಗಿ ಹೇಳಿ ಲಿಂಗರಾಜನಗರ ಶೆಟ್ಟರ್ ಲೇಔಟ್ದಲ್ಲಿನ ಮನೆಯಿಂದ ಹೋದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸಪ್ಪ ಹುಡೇದ ಎಂಬುವರೇ ಕಾಣೆಯಾದ ವ್ಯಕ್ತಿ. ಜನೆವರಿ 13ರಂದು ಮುಳಗುಂದಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ತಮ್ಮ ತಂದೆ ಈವರೆಗೂ ವಾಪಸ್ಸಾಗಿಲ್ಲ ಎಂದು ಮಗ ಮಹಾಂತೇಶ ಹುಡೇದ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಓರ್ವ ಸಾವು
ಕಲಘಟಗಿ: ಇಲ್ಲಿನ ಹು-ಕಾರವಾರ ಹೆದ್ದಾರಿಯ ತಂಬೂರ ಕ್ರಾಸ್ ಬಳಿಯಲ್ಲಿ ಮರವೊಂದಕ್ಕೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಹುಬ್ಬಳ್ಳಿಯ ಕೃಷ್ಣ ನಾರಾಯಣ ಹೊಸಳ್ಳಿ (25) ಎಂಬುವರು ಸಾವನ್ನಪ್ಪಿದ್ದು, ಮಂಜುನಾಥ ಅರಳಿಮರದ ಎಂಬುವವರು ಗಾಯಗೊಂಡ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗುರುವಾರ ಸಂಜೆ ದರ್ಗಾದಿಂದ ಹುಬ್ಬಳ್ಳಿಗೆ ಮರಳಿ ಬರುವ ವೇಳೆಯಲ್ಲಿ ಸವಾರನ ನಿರ್ಲಕ್ಷದಿಂದಾಗಿ ಈ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

