ಧಾರವಾಡ

ವಚನ ಕ್ರಾಂತಿ ನಡೆಸಿದ ಹಳಕಟ್ಟಿ

Published On :

ಧಾರವಾಡ: ವಚನ ಸಾಹಿತ್ಯಕ್ಕೆ ಮಾರು ಹೋಗಿದ್ದ ಫ.ಗು. ಹಳಕಟ್ಟಿ ಅವರು ಅನೇಕ ವಚನ ಸಾಹಿತ್ಯ ಕೃತಿಗಳನ್ನು ರಚಿಸಿ ವಚನ ಕ್ರಾಂತಿ ನಡೆಸಿದವರು. ಅವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನ ಸಂಕಲನದ ಕೃತಿಗಳು ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳಾಗಿವೆ ಎಂದು ಅಕ್ಕನ ಬಳಗದ ಉಪಾಧ್ಯಕ್ಷೆ ಮೀನಾಕ್ಷಿ ಕೋಟೂರ ಹೇಳಿದರು.
ಇಲ್ಲಿನ ಅಕ್ಕನ ಬಳಗದಲ್ಲಿ ಗುರುವಾರ ನಡೆದ ವಚನ ಪಿತಾಮಹ ಶರಣ ಡಾ. ಫ.ಗು. ಹಳಕಟ್ಟಿ 133ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಫ.ಗು. ಹಳಕಟ್ಟಿ ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ದೂರದೃಷ್ಟಿ ವ್ಯಕ್ತಿತ್ವ ಹೊಂದಿದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಜೊತೆಗೆ ಸಂಘಟನೆ, ಕೃಷಿ, ನೇಕಾರಿಕೆ, ಸಹಕಾರಿ ಮತ್ತು ಇತರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದರು ಎಂದು ಹೇಳಿದರು.
ಶರಣ ಎಂ.ಎ. ಹಂಚಿನಾಳ ಗಮನ ಗಾಯನವನ್ನು ಪ್ರಸ್ತುತಪಡಿಸಿದರು. ಶಾರದಾ ಬೆಲ್ಲದ, ಗೌರಮ್ಮ ನ್ಯಾಮತಿ, ನಳಿನಾಕ್ಷಿ ಅರಳಗುಪ್ಪಿ ಇದ್ದರು. ಕಲ್ಪನಾ ಕಟಗಿ ಪರಿಚಯಿಸಿದರು. ಅಧ್ಯಕ್ಷೆ ಪ್ರಭಾವತಿ ಮೂರಶಿಳ್ಳಿ ಸ್ವಾಗತಿಸಿದರು. ಪ್ರೇಮಾ ಹಲಕಿ ನಿರೂಪಿಸಿದರು. ಸುಜಾತಾ ಕುಂದಗೋಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.