ಧಾರವಾಡ

ಉತ್ತರಾಖಂಡ ಸಹಾಯಾರ್ಥ 14ರಂದು ಸಭೆ

Published On :

ಧಾರವಾಡ: ಕೇದಾರನಾಥ ದೇವಾಲಯದ ಪರಂಪರೆ ಸಂರಕ್ಷಣೆ ಹಾಗೂ ಉತ್ತರಾಖಂಡದ ಸಹಾಯಾರ್ಥವಾಗಿ ಬೆಂಗಳೂರಿನಲ್ಲಿ ಜು. 14ರಂದು ರಾಜ್ಯಮಟ್ಟದ ಸಭೆ ನಡೆಯಲಿದೆ ಎಂದು ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಸದಸ್ಯ ಜಿ.ಆರ್. ಹಿರೇಮಠ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದಿಂದಾಗಿ ಹಿಮಾಲಯದಲ್ಲಿನ ಕೇದಾರನಾಥ ಮಂದಿರ ಹೂಳಿನಲ್ಲಿ ತುಂಬಿದೆ. ಅಲ್ಲದೇ, ಅಕ್ಕಪಕ್ಕದ ಪ್ರದೇಶಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಗೌರಿಕುಂಡದಿಂದ ಮಂದಿರಕ್ಕೆ ಹೋಗುವ ಸುಮಾರು 14 ಕಿ.ಮೀ. ರಸ್ತೆ ಭೂಕುಸಿತದಿಂದ ಹಾಳಾಗಿದೆ. ಇದರಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯವಸ್ತವಾಗಿದೆ. ಅದರ ನವನಿರ್ಮಾಣಕ್ಕೆ ರಾಜ್ಯದ ಜನತೆಯಿಂದ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗುತ್ತಿದೆ. ಆದ್ದರಿಂದ, ವೀರಶೈವ ಸಮಾಜ ಹಾಗೂ ವಿವಿಧ ಸಮಾಜದ ಜನತೆ ಸಭೆಯಲ್ಲಿ ಭಾಗವಹಿಸಿ ಉತ್ತರಾಖಂಡ ಜನತೆಗೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು. ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಸ್ವಾಮೀಜಿ ಹಾಗೂ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ  ಸಭೆ ನಡೆಯಲಿದೆ. ಈ ಸಂದರ್ಭ ತೋಟಗಾರಿಕೆ ಸಚಿವ ಶ್ಯಾಮನೂರ ಶಿವಶಂಕರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುರೇಶ ಅಂಗಡಿ, ಮೋಹನ ಲಿಂಬಿಕಾಯಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಡಾ. ಎಸ್.ಆರ್. ರಾಮನಗೌಡ, ಸಿ.ಎಸ್. ಪಾಟೀಲ, ನಾಗರಾಜ ನೀರಲಗಿ, ಬಸವಂತಪ್ಪ ಕೋಯಪ್ಪನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.