ಧಾರವಾಡ

ಇಂದು ಯೋಗ ಶಿಬಿರ

Published On :

ಧಾರವಾಡ: ಭಾವಸಾರ ವಿಜನ್ ಇಂಡಿಯಾ ವತಿಯಿಂದ ಜೂ. 20ರಂದು ಬೆಳಗ್ಗೆ 6ರಿಂದ 8ರ ವರೆಗೆ ಭಾವಸಾರ ಮಂಗಲ ಕಚೇರಿಯಲ್ಲಿ ಯೋಗ ಉಚಿತ ಶಿಬಿರ ನಡೆಯಲಿದೆ. ಯೋಗ ತಜ್ಞರಾದ ಈರಯ್ಯ ಗುಡ್ಡದಮಠ, ರಾಜೇಂದ್ರ ಮೀರಜಕರ ಶಿಬಿರ ನಡೆಸಿಕೊಡುತ್ತಾರೆ. ಸಮಾಜದ ಜನತೆ ಪ್ರಯೋಜನ ಪಡೆಯಬೇಕೆಂದು ಸಂಘಟನೆ ಅಧ್ಯಕ್ಷ ಶ್ರೀಹರಿ ಟಿಕಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈದಿಗಳ ಮಧ್ಯೆ ಜಗಳ
ಧಾರವಾಡ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಊಟದ ವಿಚಾರವಾಗಿ ಕೈದಿಗಳಿಬ್ಬರ ಮಧ್ಯ ಜಗಳ ಉಂಟಾಗಿದೆ. ಮುಂಜಾನೆ 9ರ ಸುಮಾರಿಗೆ ಕಾರಾಗೃಹದಲ್ಲಿ ಊಟಕ್ಕೆ ಎಲ್ಲ ಕೈದಿಗಳನ್ನು ಬಿಡಲಾಗಿತ್ತು. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ ನಾಗರಾಜ ಹಾಗೂ ಸಾದಾ ಬಂದಿ ಕೈದಿ ಪಿರೋಜ ಎಂಬುವರ ಮಧ್ಯ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಜಗಳ ಹೋಗಿತ್ತು. ಆದರೆ, ಸಹಕೈದಿಗಳು ಜಗಳವನ್ನು ಬಿಡಿಸಿದ್ದಾರೆ ಎಂದು ಗೊತ್ತಾಗಿದೆ. ಘಟನೆಯಲ್ಲಿ ಪಿರೋಜನ ಮುಖಕ್ಕೆ ಗಾಯವಾಗಿದೆ. ಕಾರಾಗೃಹದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಊಟ ಮಾಡುತ್ತಿದ್ದ ವೇಳೆ ಎಲ್ಲ ಕೈದಿಗಳು ಪಾಲ್ಗೊಂಡಿದ್ದು, ಈ ಇಬ್ಬರು ಕೈದಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆಂದು ಕಾರಾಗೃಹದ ಸಿಬ್ಬಂದಿ ಪತ್ರಿಕೆಗೆ ತಿಳಿಸಿದ್ದಾರೆ.

ಬ್ರೌನ್ ಶುಗರ್: ಬಂಧನ
ಧಾರವಾಡ: ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ. ನಗರದ ಸತ್ತೂರು ಪ್ರದೇಶದ ಕೆಎಚ್‌ಬಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉಗಾಂಡಾ ದೇಶದ ಜೆಮ್ಸ್ ಒರೆಲೋ (23) ಹಾಗೂ ಸುಬೋಗಾ ಕ್ಯಾಥರೀನ್(24) ಎಂಬುವರೇ ಬಂಧಿತರು. ಅವರ ಬಳಿ ಇದ್ದ ರು. 7.2 ಲಕ್ಷ ಮೌಲ್ಯದ 180 ಗ್ರಾಂ ಬ್ರೌನ್ ಶುಗರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ವಿದ್ಯಾರ್ಥಿಗಳು ನಗರದ ತೇಜಸ್ವಿನಿ ಬಡಾವಣೆಯ ಖಾಸಗಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಕಾರ್ಯಾಚರಣೆ ಎಸಿಪಿ ಎಚ್.ಎಸ್ ಕೇರಿ ನೇತೃತ್ವದಲ್ಲಿ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.