ನಾಳೆ ಪೂರ್ವಭಾವಿ ಸಭೆ
ನವಲಗುಂದ: ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಣೆ ನಿಮಿತ್ತ ಮಾ. 22ರಂದು 11ಕ್ಕೆ ಇಲ್ಲಿನ ಪಂಚಗೃಹ ಹಿರೇಮಠದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಜಂಗಮ ಸಮಾಜ ಬಾಂಧವರು, ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ತಾಲೂಕು ಯುವ ಘಟಕದ ಅಧ್ಯಕ್ಷ ಚರಂತಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ 9901487100ಗೆ ಸಂಪರ್ಕಿಸಿ.
23ಕ್ಕೆ ಪಂ. ಮನಸೂರ ಗಾಯನ ಸೀಡಿ ಬಿಡುಗಡೆ
ಹುಬ್ಬಳ್ಳಿ: ಆಕಾಶವಾಣಿ ಧ್ವನಿ ಮುದ್ರಣ ಭಂಡಾರದಿಂದ ಆಯ್ದ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗಾಯನದ ಸಿ.ಡಿ. ಬಿಡುಗಡೆ ಸಮಾರಂಭ, ಶಾಸ್ತ್ರೀಯ ಗಾಯನ, ವಚನ ಸಂಗೀತ ಕಾರ್ಯಕ್ರಮ ಧಾರವಾಡದ ಸೃಜನಾ ರಂಗ ಮಂದಿರಲ್ಲಿ ಮಾ. 23ರಂದು ಸಂಜೆ 6ಕ್ಕೆ ನಡೆಯಲಿದೆ. ಪಂಡಿತ ಮಲ್ಲಿಕಾರ್ಜುನ ಮನಸೂರ ಅವರ 5 ಸಿಡಿಗಳು ಅಂದು ಬಿಡುಗಡೆಗೊಳ್ಳಲಿದೆ. ಆಕಾಶವಾಣಿ ಹಾಗೂ ದೂರದರ್ಶನ ಅಪರ ಮಹಾನಿರ್ದೇಶಕ ಜಿ. ಜಯಲಾಲ ಸಿಡಿ ಬಿಡುಗಡೆ ಮಾಡುವರು. ಪಂ. ರಾಜಶೇಖರ ಮನಸೂರು ಪಾಲ್ಗೊಳ್ಳುವರು. ಬಳಿಕ ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಎಂ. ವೆಂಕಟೇಶಕುಮಾರ ವಚನ ಸಂಗೀತ ನಡೆಸಿಕೊಡಲಿದ್ದಾರೆ. ವಾದಿರಾಜ ನಿಂಬರಗಿ ವಾಯಲಿನ್, ಉದಯರಾಜ ಕರ್ಪೂರ ತಬಲಾ, ಪಂಚಾಕ್ಷರಯ್ಯ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಉಲ್ಲಾಸ ಕಶಾಳಕರ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದ್ದು, ಸರೇಶ ತಳವಲಕರ ತಬಲಾ, ತನ್ಮಯ ದೇವಚಾಕೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

