ಎಸ್ಸೆಸ್ಸೆಲ್ಸಿಯಲ್ಲಿ ಕುಸಿತ, ಪಿಯುದಲ್ಲಿ ಏರಿಕೆ
ಧಾರವಾಡ: ಎಸ್ಸೆಸ್ಸೆಲ್ಸಿ ಫಲಿತಾಂಶದ ಬೆನ್ನ ಹಿಂದೆಯೇ ಪಿಯುಸಿ ಫಲಿತಾಂಶ ಸಹ ಪ್ರಕಟವಾಗಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಧಾರವಾಡ ಜಿಲ್ಲೆಯ 20 ರಿಂದ 23ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ 17ನೇ ಸ್ಥಾನದಿಂದ 16ನೇ ಸ್ಥಾನ ಏರಿದೆ.
ಕಳೆದ ವರ್ಷ ಶೇ. 65ರಷ್ಟು ಸಾಧನೆಯಾಗಿದ್ದರೆ, ಈ ವರ್ಷ ಶೇ. 66.26ರಷ್ಟು ಸಾಧನೆ ಮಾಡಿದೆ. ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಮೂರು ವಿಭಾಗಗಳ ಪೈಕಿ ಒಟ್ಟು 23,407 ವಿದ್ಯಾರ್ಥಿಗಳ ಪೈಕಿ 13,300 ವಿದ್ಯಾರ್ಥಿಗಳು ಪಾಸಾಗಿದ್ದಾರೆ. (ರೆಗ್ಯುಲರ್-17,672ರಲ್ಲಿ 11,709, ಖಾಸಗಿಯಾಗಿ 1064ರಲ್ಲಿ 224 ಹಾಗೂ ಮರಳಿ ಪರೀಕ್ಷೆ ಕಟ್ಟಿದವರಲ್ಲಿ 4671ರಲ್ಲಿ 1,363 ವಿದ್ಯಾರ್ಥಿಗಳು ಪಾಸಾಗಿದ್ದಾರೆ.) 12,649 ಬಾಲಕರ ಪೈಕಿ 6,589 (52.09) ಹಾಗೂ 10,758 ಬಾಲಕಿಯರ ಪೈಕಿ 6,711 (62.38) ಬಾಲಕಿಯರು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 8540 ವಿದ್ಯಾರ್ಥಿಗಳಲ್ಲಿ 5643 (ಶೇ. 66.08) ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 6324 ವಿದ್ಯಾರ್ಥಿಗಳ ಪೈಕಿ 3228 (ಶೇ. 67.70) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ 8,543 ವಿದ್ಯಾರ್ಥಿಗಳ ಪೈಕಿ 3,929 (ಶೇ. 45.99) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 129 ಪದವಿ ಪೂರ್ವ ಕಾಲೇಜುಗಳಿದ್ದು, ಈ ಪೈಕಿ 26 ಸರ್ಕಾರಿ, 40 ಅನುದಾನಿತ ಹಾಗೂ 63 ಖಾಸಗಿ ಕಾಲೇಜುಗಳಿವೆ. ಕಳೆದ ವರ್ಷಕ್ಕಿಂದ ಶೇ. 1ರಷ್ಟು ಹೆಚ್ಚಿನ ಸಾಧನೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಗೆ ಯಾರು ಪ್ರಥಮ, ದ್ವೀತಿಯ ಹಾಗೂ ತೃತೀಯ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಪೂರ್ಣ ಮಾಹಿತಿ ಮಂಗಳವಾರ ದೊರೆಯಲಿದೆ ಎಂದು ಪದವಿ ಪೂರ್ವ ಇಲಾಖೆ ಉಪ ನಿರ್ದೇಶಕ ರವೀಂದ್ರ ರಿತ್ತಿ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

