ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ ಕನಕಾಪುರ ನಿಧನ
ಧಾರವಾಡ: ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ. ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ಅವರಂಥ ದೇಶದ ಅದ್ಭುತ ಹಿಂದೂಸ್ಥಾನಿ ಸಂಗೀತಗಾರರ ಗಾಯನಕ್ಕೆ ಹಾರ್ಮೋನಿಯಂ ಸಾಥ್ ನೀಡಿದ್ದ ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ್ ಕನಕಾಪುರ ಇನ್ನಿಲ್ಲ.
76 ವಯಸ್ಸಿನ ಇವರು ಗುರುವಾರ ಸಂಜೆ ಧಾರವಾಡದ ಮಿಚಿಗಿನ್ ಕಂಪೌಂಡ್‌ನಲ್ಲಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಹುಬ್ಬಳ್ಳಿಯ ಆರ್.ಜಿ. ದೇಸಾಯಿ ಅವರ ಶಿಷ್ಯರಲ್ಲಿ ಒಬ್ಬರಾಗಿದ್ದು, ಕೇಸರಿಬಾಯಿ ಕೇಳಕರ್ ಅವರಿಂದ ಶಹಬ್ಬಾಶ್‌ಗಿರಿ ಪಡೆದ ಹಾರ್ಮೋನಿಯಂ ವಾದಕರಿವರು.
11ನೇ ವಯಸ್ಸಿನಿಂದಲೇ ಹಾರ್ಮೋನಿಯಂನಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆ ಮೂಲಕವೇ ಇಡೀ ದೇಶದಲ್ಲಿ ಪ್ರಸಿದ್ಧರಾದರು. ಧಾರವಾಡದ ಆಕಾಶವಾಣಿಯಲ್ಲಿ ಸತತ 23 ವರ್ಷಗಳ ಕಾಲ ಉನ್ನತ ಶ್ರೇಣಿಯ ಸಂಗೀತ ಸಂಯೋಜಕರಾಗಿದ್ದ ಇವರಿಗೆ, ಹತ್ತಾರು ಜನ ಪ್ರಸಿದ್ಧ ಶಿಷ್ಯ ಬಳಗವಿದೆ. ದಾಸರ ರಚನೆ, ಶರಣರ ವಚನ ಹಾಗೂ ಕನ್ನಡದ ಸುಪ್ರಿಸಿದ್ಧ ಕವಿಗಳ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಸಂತ್ ಕನಕಾಪುರ ಅವರು ಸುಗಮ ಸಂಗೀತದಲ್ಲಿ ಎತ್ತಿದ ಕೈ. ಮುಂಬೈನಲ್ಲಿ ನಡೆದ ಭಾರತ ಹಾರ್ಮೋನಿಯಂ ವಾದಕರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪಂ. ಕನಕಾಪುರ ಅವರಿಗೆ ಇತ್ತೀಚೆಗೆ ಕನಕ ಪುರಂದರ ಪ್ರಶಸ್ತಿ ಲಭಿಸಿದ್ದು, ಕರ್ನಾಟಕ ರಾಜ್ಯೋತ್ಸವ, ಮಹಾರಾಷ್ಟ್ರದ ಮಂಜುಶರತ್ನ, ಕರ್ನಾಟಕ ಕಲಾಕಾರ ಮಂಡಳದಿಂದ ನಾದಶ್ರೀ ಸೇರಿದಂತೆ ಹತ್ತಾರು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ಇವರ ನಿಧನಕ್ಕೆ ಪಂ. ವೆಂಕಟೇಶ ಕುಮಾರ್, ಅನಿಲ ದೇಸಾಯಿ ಸೇರಿದಂತೆ ಇಡೀ ಸಂಗೀತ ಲೋಕವೇ ಶ್ರದ್ಧಾಂಜಲಿ ಸಲ್ಲಿಸಿದೆ. ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನ. 22ರ ಬೆಳಗ್ಗೆ 8.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

