ಧಾರವಾಡ

ಹುಬ್ಬಳ್ಳಿಯಲ್ಲಿ ಹಾವಿನ ವಿಷ ಮಾರುತ್ತಿದ್ದ ನಾಲ್ವರ ಬಂಧನ

Published On :

ಕ.ಪ್ರ.ವಾರ್ತೆ ಹುಬ್ಬಳ್ಳಿ ಅ. 20
ಹುಬ್ಬಳ್ಳಿ ನಗರದ ಆಕ್ಸಫರ್ಡ್ ಕಾಲೇಜು ಬಳಿ ಶನಿವಾರ ರಾತ್ರಿ ಹಾವಿನ ವಿಷ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿ, ಅವರಿಂದ 750 ಎಂಎಲ್ ಹಾವಿನ ವಿಷ ವಶಪಡಿಸಿಕೊಂಡಿದ್ದಾರೆ.
ಗೋವಾ ಮೂಲದ ನಂದಾ ಕಾಲ್ಕುಡಕರ್(35), ಸುಮಿತ್ ವರ್ಮಾ(20), ಕುಂದಗೋಳ ತಾಲೂಕಿನ ಕಳಸ ಗ್ರಾಮದ ನಜೀರ್ ಖಾತನ್ನವರ, ಅಶ್ರಫ್ ಅಲಿ ನದಾಫ್(34) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 75 ಲಕ್ಷ ಬೆಲೆ ಬಾಳುವ ಹಾವಿನ ವಿಷ ವಶಪಡಿಸಿಕೊಂಡಿದ್ದಾರೆ.  ನಂದಾ ಮತ್ತು ಸುಮಿತ್ ಇವರಿಬ್ಬರು ಗೋವಾದಿಂದ 750 ಎಂಎಲ್. ಹಾವಿನ ವಿಷ ತಂದಿದ್ದು, ಈ ವಿಷವನ್ನು ಸ್ಥಳೀಯ ನಜೀರ್ ಮತ್ತು ಅಶ್ರಫ ಅವರೊಂದಿಗೆ ಸೇರಿ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಲ್ಲನಗೌಡ ನಾಯ್ಕರ್, ಪಿಎಸ್‌ಐ ಬಿ.ಕೆ. ಪಾಟೀಲ ಮತ್ತು ಸಿಬ್ಬಂದಿ ಮಿಂಚಿನ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ ವಿಷ ಯಾವ ಹಾವಿನದ್ದು ಎನ್ನುವುದು ಇನ್ನೂ ದೃಢಪಟ್ಟಿಲ್ಲ. ವಿಷದ ಮಾದರಿಯನ್ನು ಪತ್ತೆ ಹಚ್ಚುವುದಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.