ಧಾರವಾಡ

ಸಮಾಜ ಕಟ್ಟುವುದು ಜನಪ್ರತಿನಿಧಿಗಳ ಗುತ್ತಿಗೆಯಲ್ಲ

Published On :

ಧಾರವಾಡ: ದೇಶ ಹಾಗೂ ಸಮಾಜ ಕಟ್ಟುವ ಕೆಲಸ ಬರೀ ರಾಜಕಾರಣಿ ಅಥವಾ ಜನಪ್ರತಿನಿಧಿಗಳ ಗುತ್ತಿಗೆಯಲ್ಲ. ಪ್ರತಿಯೊಬ್ಬರೂ ಅದರಲ್ಲೂ ಶಿಕ್ಷಕರು ತಮ್ಮ ವೃತ್ತಿಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಆ ಕಾರ್ಯಕ್ಕೆ ಹೆಚ್ಚಿನ ಬಲ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
 ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆಯನ್ನು ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಮಾಜದ ಒಳತಿಗಾಗಿ ಶಿಕ್ಷಕರು ಶ್ರಮಿಸಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಿ. ಯಾರನ್ನಾದರೂ ನಂಬಿ ರಾಜಕಾರಣ ಕಾರ್ಯದಿಂದ ಶಿಕ್ಷಕ ವೃತ್ತಿ ಘನತೆ ಹಾಳಾಗಿಸಬೇಡಿ. ಸರ್ಕಾರ ವಿದ್ಯಾರ್ಥಿ, ಶಿಕ್ಷಕರಿಗೆ ನೀಡುವ ಸೌಲಭ್ಯಗಳನ್ನು ಬಳಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರ್ಯ ನಿರ್ವಹಿಸಿ ಎಂದರು.
ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಪಿ.ಪಿ. ಬಾರಕೇರ, ಜಗದೀಶ ಕೂಡ್ಲ, ಗುರುಸಿದ್ದಪ್ಪ ಗುಂಜಳ, ಶಿವನಗೌಡ ಪಾಟೀಲ, ಮಾರುತಿ ಭಜಂತ್ರಿ, ಅಶೋಕ ಬಿಸಿಕೊಟ್ಟಿ, ವೀರಪ್ಪ ಹಾದಿಮನಿ, ಶ್ಯಾಮ ಶೇರಖಾನೆ, ರೇಣುಕಾ ಭೋಸಲೆ, ಅನುಸೂಯಾ ಯಕ್ಕುಂಡಿ, ಮಂಜುಳಾ ಸಂಗಣ್ಣವರ, ಫಕ್ಕೀರಗೌಡ ಹಿರೇಗೌಡರಗೆ  ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ರತ್ನವ್ವ ಕಳ್ಳಿಮನಿ, ಟಿ.ಜಿ. ಬಾಲಣ್ಣವರ, ಪ್ರೇಮಾಕೋಮಾರ ದೇಸಾಯಿ, ಮಹಾಬಳೇಶ್ವರ ಅಣ್ಣಿಗೇರಿ, ಪಿ.ಎ. ಮೇಘಣ್ಣವರ, ಎ.ಎನ್. ಪಾಟೀಲ, ಚೆನ್ನವೀರಗೌಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.