ಇಂದು ಪ್ರತಿಭಟನಾ ರ್ಯಾಲಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯದ ಚತುಷ್ಪಥ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಅವಳಿ ನಗರ ಮಧ್ಯದ ಪ್ರಯಾಣಿಕರು ಸೆ. 7ರಂದು ಬೆಳಗ್ಗೆ 11ಕ್ಕೆ ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದಾರೆ. ಹೊಸೂರು ವೃತ್ತದಿಂದ ಪ್ರಾರಂಭಗೊಳ್ಳುವ ಪ್ರತಿಭಟನಾ ರ್ಯಾಲಿ, ಉಣಕಲ್ನ ಶ್ರೀನಗರ ಕ್ರಾಸ್ವರೆಗೆ ನಡೆಯಲಿದೆ.
ಇಂದು ಕಾಲೇಜು ಉದ್ಘಾಟನೆ
ಧಾರವಾಡ: ಇಲ್ಲಿನ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜನ್ನು ಸೆ. 7ರಂದು ಭಾರತ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ವಾರ್ತಾ ಇಲಾಖೆ ಸಚಿವ ಸಂತೋಷ ಲಾಡ್ ಉದ್ಘಾಟಿಸುತ್ತಾರೆಂದು ಕಾಲೇಜು ಪ್ರಾಚಾರ್ಯ ಎಂ.ಎಸ್. ಗಾಣಗೇರ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳದ ಸಿದ್ಧಾರೂಢಮಠದ ರಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ, ಕವಿವಿ ವಿದ್ಯಾ ಮಂಡಳ ವಿಭಾಗದ ಡಾ. ಐ.ಎಂ. ಖಾಜಿ ಮತ್ತಿತರರು ಭಾಗವಹಿಸುತ್ತಾರೆ. ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಅಧ್ಯಕ್ಷತೆ ವಹಿಸುತ್ತಾರೆ ಎಂದು ಹೇಳಿದರು. ಆಡಳಿತ ಮಂಡಳಿಯ ಪುರುಷೋತ್ತಮ ಜಾಧವ, ಗೌರವ ಕಾರ್ಯದರ್ಶಿ ಶಿವಾಜಿ ಘಾಟಗೆ ಎಂ.ಎಂ. ವನಳ್ಳಿ ಇದ್ದರು.
ರೇಣುಕಾ ಬಾಯಿ ನಿಧನ
ಧಾರವಾಡ: ಇಲ್ಲಿನ ಕೃಷಿನಗರ (ಕೆಲಗೇರಿ ರಸ್ತೆ) ನಿವಾಸಿಯಾಗಿದ್ದ ರೇಣುಕಾ ಬಾಯಿ ನರಸಪ್ಪ ನವಲೆ(85) ಇತ್ತೀಚೆಗೆ ನಿಧನರಾದರು. ಮೃತರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧಿಕಾರಿ ಡಿ.ಎನ್. ನವಲೆ ಅವರ ತಾಯಿ. ಮೃತರಿಗೆ ನಾಲ್ಕು ಪುತ್ರರು ಮತ್ತು ನಾಲ್ಕು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

