ಧಾರವಾಡ

ಚೆಕ್ ನೀಡಲು ಒಪ್ಪಿದ ಆಯುಕ್ತರು

Published On :

ಹುಬ್ಬಳ್ಳಿ: ಮಹಾನಗರ ಪಾಲಿಕೆ ನಿವೃತ್ತ ಉದ್ಯೋಗಿಗೆ ಗ್ರ್ಯಾಚುಟಿ ಸಹಿತ ಸಿಗಬೇಕಾದ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪಾಲಿಕೆ ಆಯುಕ್ತರ ಕಾರು ಜಪ್ತಿ ಮಾಡಲು ಮುಂದಾದಾಗ ಚೆಕ್ ನೀಡಲು ಒಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆಯಿತು. 1958ರಿಂದ 1994ರ ವರೆಗೆ ಸೇವೆ ಸಲ್ಲಿಸಿದ ದ್ವಿತೀಯ ದರ್ಜೆ ಸಹಾಯಕ ಮಧುಕರ ಲಾತೂರಕರ ಅವರಗೆ ಪಾಲಿಕೆಯಿಂದ ಸಿಗಬೇಕಿದ್ದ ಸೌಲಭ್ಯ ಲಭಿಸಿರಲಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಲಾತೂರಕರ ಪರ ತೀರ್ಪು ಬಂದಿದ್ದರೂ ಅವರಿಗೆ ಸಿಗಬೇಕಿದ್ದ ಆರ್ಥಿಕ ಸೌಲಭ್ಯವನ್ನು ಪಾಲಿಕೆ ನೀಡಿರಲಿಲ್ಲ. ಕೊನೆಗೆ ನ್ಯಾಯಾಲಯದ ಆದೇಶದಂತೆ ಪಾಲಿಕೆ ಆಯುಕ್ತರ ಕಾರು ಸೀಜ್ ಮಾಡಲು ಮುಂದಾದ ಸಂದರ್ಭದಲ್ಲಿ ಆಯುಕ್ತರು ಕೂಡಲೇ ಚೆಕ್ ನೀಡುವ ಭರವಸೆಯನ್ನು ಲಾತೂರಕರ ಪರ ವಕೀಲ ಎ.ಐ. ಸಿದ್ದೀಕ್ ಅವರಿಗೆ ನೀಡಿದರು. ಮಹಾನಗರ ಪಾಲಿಕೆಯು ಲಾತೂರಕರ ಅವರಿಗೆ ರು. 1.86 ಲಕ್ಷ ಹಣ ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.