ಎಲ್ಲೆ ಮೀರಿದ ಕೃಷಿ ಆಸಕ್ತರು
ಧಾರವಾಡ: ಕೃಷಿ ಮೇಳದ ಎರಡನೇ ದಿನ ಭಾನುವಾರ ಕೃಷಿ ವಿವಿ ಆವರಣ ರೈತರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿಸ್ತರಣಾ ಕಾರ್ಯಕರ್ತರಿಂದ ತುಂಬಿ ತುಳುಕಿತು. ಜತೆಗೆ ಮುಖ್ಯಮಂತ್ರಿ ಹಾಗೂ ಅವರ ಬಳಗ.
ಹೀಗಾಗಿ 2ನೇ ದಿನ ಕೃಷಿ ಮೇಳ ತುಸು ಜೋರಾಗಿಯೇ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ತಡವಾಗಿ ಆಗಮಿಸಿದರೂ ಕಾಯ್ದು, ಸುರಿಯುವ ಮಳೆಯಲ್ಲಿಯೇ ಅವರ ಭಾಷಣ ಕೇಳಿ, ಅವರ ಭರವಸೆಯ ಮಾತುಗಳಿಗೆ ಚಪ್ಪಾಳೆ ಮಳೆ ಸುರಿಸಿದರು. ಲಕ್ಷಾಂತರ ಜನ ಹಾಗೂ ಸಾವಿರಾರು ವಾಹನಗಳ ದಟ್ಟಣೆಯಿಂದ ಕೃಷಿ ವಿವಿ ಎದುರಿಗೆ ಇರುವ ರಾಷ್ಟ್ರೀಯ ಹೆದ್ದಾರಿ 4 ಸುಮಾರು ನಾಲ್ಕು ಗಂಟೆ ಟ್ರಾಫಿಕ್ ಜಾಮ್ನಿಂದ ಕೂಡಿತ್ತು. ಈ ಮಧ್ಯೆ ಮಳೆರಾಯನ ಆಗಮನ ಬೇರೆ.
ಪ್ರಶಸ್ತಿ ಪ್ರದಾನ: ಉದ್ಘಾಟನೆ ಅನಂತರ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಿಂದ ಶ್ರೇಷ್ಠ ಕೃಷಿಕರಾದ ಪ್ರಸಾದ ರಾಮ ಹೆಗಡೆ, ಶ್ರೇಷ್ಠ ಕೃಷಿ ಮಹಿಳೆಯಾದ ಜಯಶ್ರೀ ಹೆಗಡೆ, ಹಾವೇರಿ ಜಿಲ್ಲೆಯ ಗದಿಗಯ್ಯ ಶೇಖಯ್ಯ ಹಿರೇಮಠ, ರಾಜೇಶ್ವರಿ ವೀರನಗೌಡ ಪಾಟೀಲ, ಗದಗ ಜಿಲ್ಲೆಯ ಹನುಮಂತಪ್ಪ ನಾಗಪ್ಪ ಪಟ್ಟೇದ, ಅನುಸೂಯಾ ಕುಬೇರಪ್ಪ ಪರಡ್ಡಿ, ಧಾರವಾಡ ಜಿಲ್ಲೆಯ ಬಸವರಾಜ ಮಲ್ಲೇಶಪ್ಪ ಕುಂದಗೋಳ, ಸಾವಿತ್ರಿ ಮಹಾದೇವಪ್ಪ ಕೇಂಪಸಣ್ಣವರ, ಬೆಳಗಾವಿ ಜಿಲ್ಲೆಯ ಮಹದೇವಪ್ಪಾ ಬಸಪ್ಪಾ ತಿರಕಣ್ಣವರ, ದೀಪಾ ವಸಂತ ಕುಲಕರ್ಣಿ, ಬಿಜಾಪುರ ಶಾಂತಪ್ಪ ಯಂಕಪ್ಪ ಕೆಂಚರೆಡ್ಡಿ, ಗಂಗಾಬಾಯಿ ಸಾಯಬಣ್ಣ ಜನವಾಡ, ಬಾಗಲಕೋಟೆ ಜಿಲ್ಲೆಯ ರಮೇಶ ಮಹಾದೇವಪ್ಪ ಬೊಳಲಮಟ್ಟಿ, ಗೀತಾ ರಾಮಪ್ಪ ಕಡಕೋಳ ಅವರನ್ನು ಸನ್ಮಾನಿಸಲಾಯಿತು.
ರೈತರಿಂದ ರೈತರಿಗಾಗಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳ ತಾಂತ್ರಿಕತೆಗಳು ಮತ್ತು ಆಹಾರ ಧಾನ್ಯಗಳ ಮೌಲ್ಯವರ್ಧನೆ ಕುರಿತು ರೈತ ವಿಜ್ಞಾನಿಗಳಾದ ನಿಂಗಯ್ಯ ಹಿರೇಮಠ, ಬಸಯ್ಯ ಬೆಳ್ಳಿಗಟ್ಟಿ, ಮಹಾದೇವಪ್ಪ ಮರಿತಮ್ಮಪ್ಪ ಸೇರಿದಂತೆ ಹಲವು ರೈತರು ಅನುಭವಗಳನ್ನು ಹಂಚಿಕೊಂಡರು.
ಗಮನ ಸೆಳೆದ ಶ್ವಾನ: ಭಾನುವಾರ ಸುಮಾರು 40 ಜಾತಿಯ ಶ್ವಾನಗಳು ಅದರಲ್ಲಿ 22 ತಳಿಗಳು ಮುಧೋಳ, ಗ್ರಾವಿಡೆನ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರಿವರ್, ಲ್ಯಾಬ್ರಾಡರ್, ಪಗ್, ಡ್ಯಾಸ್ಹೊಂಡ, ಸೇಂಟೆ ಬರ್ನಾರ್ಡ್, ಡಾಲ್ಮೆಶಿಯನ, ಮಿನಿಯಾ ಪಿಂಚರ್ ಪ್ರಮುಖವಾಗಿ ಗಮನ ಸೆಳೆದವು.
ಭಾನುವಾರ ಬೀಜ ಘಟಕದಿಂದ 500 ಕ್ವಿಂಟಲ್ ಹಿಂಗಾರಿ ಬೆಳೆಗಳ ಬೀಜಗಳನ್ನು ಸುಮಾರು ರು. 22 ಲಕ್ಷ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರ ಕೃಷಿ ತಂತ್ರಜ್ಞಾನ ಸಲಹಾ ಕೇಂದ್ರಕ್ಕೆ 845 ರೈತ ಬಾಂಧವರು ಭೇಟಿ ನೀಡಿ, ವಿವಿಧ ಸಮಸ್ಯೆಗಳನ್ನು ವಿಜ್ಞಾನಿಗಳ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯ ಸಂರಕ್ಷಣೆ ಬೇಸಾಯ ಶಾಸ್ತ್ರ, ತೋಟಗಾರಿಕೆ ಬೆಳೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು ಎಂದು ಕೃಷಿ ವಿವಿ ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

