ಧಾರವಾಡ

ಭೀಕ್ಷಾಟನೆ: ಮಕ್ಕಳ ವಶ

Published On :

ಧಾರವಾಡ: ನಗರದ ಕೃಷಿ ವಿವಿ ಆವರಣದಲ್ಲಿ ಬುಧವಾರ ಕೃಷಿಮೇಳದಲ್ಲಿ ಭೀಕ್ಷಾಟನೆಯಲ್ಲಿ ಪಾಲ್ಗೊಂಡ ಇಬ್ಬರು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಶಕ್ಕೆ ಪಡೆದುಕೊಂಡಿದೆ. ತಾಲೂಕಿನ ಮಂಗಳಗಟ್ಟಿ ಗ್ರಾಮದ 9 ವರ್ಷದ ಪೂಜಾ, 6 ವರ್ಷದ ಲಕ್ಷ್ಮೀ ಎಂಬ ಬಾಲಕಿಯರು ಭೀಕ್ಷಾಟನೆ ಮಾಡುವ ವೇಳೆ ಘಟಕದವರು ದಾಳಿ ನಡೆಸಿ ವಿಚಾರಿಸಲಾಗಿ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬಾಲಮಂದಿರದಲ್ಲಿ ಇರಿಸಲಾಗಿದೆ. ಸೆ. 27ರಂದು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಘಟಕದ ಡಾ೤ ರಮೇಶ ಪೂಜಾರ, ನಿಂಗಪ್ಪ ಮಡಿವಾಳರ, ವಿನಯಾ ಬೆನಗಿ, ಕೃಷ್ಣ, ಭಾರತಿ ಭರಡಿ, ಪ್ರಕಾಶ ಕೊಡ್ಲಿವಾಡ ಪಾಲ್ಗೊಂಡಿದ್ದರು.
ಬಾಲಕ ಅಪಹರಣ
ಹುಬ್ಬಳ್ಳಿ: ನಾಗಶೆಟ್ಟಿಕೊಪ್ಪದ ಅಪ್ರಾಪ್ತ ಬಾಲಕನನ್ನು ಅಪಹರಿಸಲಾಗಿದೆ ಎಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಟ್ಯೂಷನ್‌ಗೆ ಹೋಗುತ್ತಿದ್ದ ವೇಳೆ ಕೇಶ್ವಾಪುರದ ನಾಗಶೆಟ್ಟಿಕೊಪ್ಪದ ಚನ್ನವೀರಯ್ಯಸ್ವಾಮಿ ಗುದ್ಲಿಸ್ವಾಮಿ ಹಿರೇಮಠ (15) ವರ್ಷದ ಬಾಲಕನನ್ನು ಅಪಹರಿಸಲಾಗಿದೆ. ಈ ಕುರಿತು ಬಾಲಕನ ತಂದೆ ಗುದ್ಲಿಸ್ವಾಮಿ ಹಿರೇಮಠ ಅವರು ದೂರು ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.