ಧಾರವಾಡ

ಉಗ್ರರ ದಾಳಿ: ಬಿಜೆಪಿ ಪ್ರತಿಭಟನೆ

Published On :

ಧಾರವಾಡ: ಜಮ್ಮುವಿನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿ ಖಂಡಿಸಿ ಬಿಜೆಪಿ ಸ್ಥಳೀಯ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ದೇಶದ ಭದ್ರತೆ ಕಾಪಾಡಬೇಕಾದ ಪ್ರಧಾನಮಂತ್ರಿಗಳು ಗಡಿ ರಕ್ಷಣೆ ವಿಷಯದಲ್ಲಿ ತೀರಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಉಗ್ರರ ಬಗ್ಗೆ ಮೃದು ಧೋರಣೆ ತೋರುತ್ತಿದ್ದು, ಉಗ್ರರು ಆಗಾಗ ಭಾರತೀಯ ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟು ವಿವೇಕಾನಂದ ವೃತ್ತದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಪ್ರತಿಕೃತಿ ದಹಿಸಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ದೇಶದ ಬಗ್ಗೆ ಕಿಂಚಿತ್ ಕಾಳಜಿ ವಹಿಸದೇ ಉಗ್ರರೊಂದಿಗೆ ಹೊಂದಾಣಿಕೆ ಮಾಡಿಕೊಂಡಂತಿದೆ. ದೇಶವನ್ನು ಉಗ್ರರಿಗೆ ಒತ್ತೆಯನ್ನಾಗಿಡಲು ಕಾಂಗ್ರೆಸ್ ಸರ್ಕಾರ ಕುತಂತ್ರ ನಡೆಸಿದೆ. ಇಂದಿನ ದಿನಗಳಲ್ಲಿ ದೇಶದ ಸ್ಥಿತಿ ಅಧೋಗತಿಗೆ ತರಲು ದೇಶದ ಪ್ರಧಾನಿಯೇ ಕಾರಣ. ಇದಕ್ಕೆ ಬೆಂಬಲವಾಗಿ ಸೋನಿಯಾಗಾಂಧಿ ನಿಂತಿದ್ದಾರೆ. ಈ ಘಟನೆ ಜವಾಬ್ದಾರಿ ಹೊತ್ತು ಕೇಂದ್ರ ಸರ್ಕಾರ ಕೂಡಲೇ ರಾಜಿನಾಮೆ ನೀಡಬೇಕೆಂದರು.
ನಾಗರಾಜ ನಾಯ್ಕ, ನಾಗರಾಜ ಹುಣಸಿಕಟ್ಟಿ, ಪ್ರಮೋದ ಕಾರಕೂನ, ರಾಜು ಜರ್ತಾರಕರ, ಮಹೇಂದ್ರ ಕವತಾಳ, ವಿಜಯಾನಂದ ಶೆಟ್ಟಿ, ಮೋಹನ ರಾಮದುರ್ಗ, ಈರೇಶ ಅಂಚಟಗೇರಿ, ಬಸವರಾಜ ಬೆಣ್ಣಿ, ಪಾಲಿಕೆ ಸದಸ್ಯರಾದ ಶಿವಣ್ಣ ಬಡವಣ್ಣನವರ, ಸಂಜಯ ಕಪಟಕರ, ಶಿವು ಹಿರೇಮಠ, ರಾಮಣ್ಣ ಬಡಿಗೇರ, ಸಂತೋಷ ಸವಣೂರ, ಮುನಿರಂಗಪ್ಪ ನಾಶಿ, ಸುರೇಶ ಬೆದರೆ, ಮಂಜು ನಡಟ್ಟಿ, ರಾಕೇಶ ದೊಡಮನಿ, ಭೀಮು ಸವಣೂರು ಸುನಿಲ ಮೋರೆ, ಸಂತೋಷ ನಾಗಮ್ಮನ್ನವರ, ಸುನಿಲ ಸಂಡೂರ, ಗೀತಾ ಪಾಟೀಲ, ಅನುಸೂಯ ಹಿರೇಮಠ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.