ಪ್ರಚಾರಕ್ಕೆ ನೆರವಾಗಲಿದೆ ನೇರ ಅಂಚೆ ಸೇವೆ
-ಬಸವರಾಜ ಹಿರೇಮಠ
ಧಾರವಾಡ: ಶಿಕ್ಷಣ, ಆರೋಗ್ಯ ಸಂಸ್ಥೆ ಹಾಗೂ ಮಾರಾಟಗಾರರಿಗೆ ಪ್ರಚಾರದ ದೃಷ್ಟಿಯಿಂದ ತುಂಬ ಅನುಕೂಲವಾಗಿರುವ ಅಂಚೆ ಇಲಾಖೆಯ ನೇರ ಅಂಚೆ ಸೇವೆ, ಈಗ ಲೋಕಸಭೆ ಚುನಾವಣೆಯಲ್ಲೂ ನೆರವಾಗಲಿದೆ.
ಅಭ್ಯರ್ಥಿಗಳು ನೇರ ಅಂಚೆ ಸೇವೆ ಮೂಲಕ ಮತದಾರರನ್ನು ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುವಂತೆ ಮಾಡಲು ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ. ಪ್ರತಿ ಕುಟುಂಬಕ್ಕೂ ಅಂಚೆ ಪೇದೆಗಳ ಮೂಲಕ ವಿಳಾಸ ರಹಿತ ಅಂಚೆ ಬಟವಾಡೆಯಾಗಲಿದೆ. ಜನತೆ ಮನಸ್ಸನ್ನು ಸೆಳೆಯಲು ಈ ಸೇವೆ ಉತ್ತಮವಾಗಿದ್ದು, ಅಭ್ಯರ್ಥಿಗಳು ತಮ್ಮ ಪ್ರಚಾರದ ಮಾಹಿತಿಯನ್ನು ನೇರ ಅಂಚೆ ಸೇವೆ ಮೂಲಕ ಮತದಾರರಿಗೆ ಮುಟ್ಟಿಸಬಹುದು.
ಆಯಾ ನಗರಗಳ ವ್ಯಾಪ್ತಿಯಲ್ಲಿ 20 ಗ್ರಾಂ ತೂಕದ ಪ್ರತಿ ಕವರ್ಗೆ ರು. 2, ಉಳಿದೆಡೆಗೆ ರು. 3 ಪಾವತಿಸಿ, ಅಭ್ಯರ್ಥಿಗಳು ಪತ್ರಗಳನ್ನು ಕಳುಹಿಸಬಹುದು. ತೂಕ ಹೆಚ್ಚಿದ್ದರೆ, ಪ್ರತಿ 20 ಗ್ರಾಂಗೆ ರು. 1 ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಮಾರ ಹೆಗಡೆ, ಬಾಗಲಕೋಟೆ ಕ್ಷೇತ್ರದಿಂದ ಶಂಕರ ಬಿದರಿ ನೇರ ಅಂಚೆ ಸೇವೆ ಮೂಲಕ ಲಕ್ಷಾಂತರ ಮತದಾರರ ಬಾಗಿಲು ಬಡಿದಿದ್ದಾರೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಅಭ್ಯರ್ಥಿಗಳು ಸುಮಾರು 15 ಲಕ್ಷ ಮತದಾರರನ್ನು ವೈಯಕ್ತಿಕವಾಗಿ ತಲುಪುವುದು ಕಷ್ಟ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ನೇರ ಅಂಚೆ ಸೇವೆ ಬಳಸಿಕೊಳ್ಳಲು ಹಲವು ಅಭ್ಯರ್ಥಿಗಳು ಮುಂದಾಗಿದ್ದಾರೆ. ಮಾಹಿತಿಗೆ ಮೊ. 94808 09762 / 94808 09757 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

