ಯಶಸ್ವಿ ತಾಂತ್ರಿಕ ಮೇಳ
ಧಾರವಾಡ: ಇಲ್ಲಿಯ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ಇನ್ಫೋಸ್ಪಾರ್ಕ್ ತಾಂತ್ರಿಕ ಮೇಳಕ್ಕೆ ಚಾಲನೆ ನೀಡಲಾಯಿತು. ಮೈಂಡ್ ಕ್ರಾಫ್ಟ್ ಕಂಪನಿ ಉಪಾಧ್ಯಕ್ಷ ಸಂದೇಶ ಚವ್ಹಾಣ, ತಾಂತ್ರಿಕ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಗಮನಿಸಿ ಅದರೊಂದಿಗೆ ತಾವು ಬದಲಾವಣೆ ಹೊಂದಿ ಆವಿಷ್ಕಾರಗಳಲ್ಲಿ ಭಾಗಿಯಾಗಬೇಕು ಎಂದರು. ಐಎಸ್ಸಿಟಿ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅನಿಲ್ ಘಾಸ್ತೆ, ಪ್ರಸಕ್ತ ತಾಂತ್ರಿಕ ಬೆಳವಣಿಗೆಗಳು ಮತ್ತು ಲಿನಕ್ಸ್ ಪ್ಲಾಟಫಾರ್ಮ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಪ್ರೊ.ವಿ.ಕೆ. ಪರ್ವತಿ, ಪ್ರಾಂಶುಪಾಲ ಡಾ. ಎಸ್. ಮೋಹನಕುಮಾರ, ಶೈಣಿ ರಾಜೇಂದ್ರಕುಮಾರ, ಉನ್ನತಿ ಕೊಪ್ಪಿಕರ, ಡಾ. ಜಗದೀಶ ಪೂಜಾರಿ, ಪ್ರೊ. ತನ್ವೀರ್ ಅಹಮದ್, ಪ್ರೊ. ಆರತಿ ನಾಯಕ, ಪ್ರೊ. ಸಚಿನ ಜೋಶಿ, ಪ್ರೊ. ಸಚಿನ ಎಸ್.ಎಲ್ ಇದ್ದರು.
ವಿಚಾರಣಾಧೀನ ಕೈದಿ ಬಂಧನ
ಕಲಘಟಗಿ: ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಶನಿವಾರ ಬೆಳಗಾವಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ತುಮರಿಕೊಪ್ಪದ ಮಂಜುನಾಥ ಕುರಬರ(30) ಎಂಬುವನೇ ಬಂಧಿತ ವಿಚಾರಣಾಧೀನ ಕೈದಿ. ಮಂಜುನಾಥ, ಕಾಡುಗಳ್ಳತನ, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟು ವಿಚಾರಣಾಧೀನ ಕೈದಿಯಾಗಿದ್ದ. ತಮ್ಮ ಕುಟುಂಬದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನನ್ನು ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿದ್ದ ಅಲ್ಲದೇ, ಅಕ್ರಮ ಕಟ್ಟಿಗೆಯ ದಾಸ್ತಾನು ಪ್ರಕರಣದಲ್ಲಿಯೂ ಶಾಮೀಲಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ಮಂಜುನಾಥನನ್ನು ವಿಚಾರಣೆ ನಡೆಸಲು ಪೊಲೀಸರು ಕಾಡಿಗೆ ಕರೆದೊಯ್ದ ಸಂದರ್ಭದಲ್ಲಿ ಪರಾರಿಯಾಗಿದ್ದ. ಖಚಿತ ಮಾಹಿತಿಯನ್ನಾಧರಿಸಿ ಇನ್ಸ್ಪೆಕ್ಟರ್ ಮಂಜುನಾಥ ನಡುವಿನಮನಿ ನೇತೃತ್ವದ ತಂಡ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

