ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ಶಂಕರ
ಧಾರವಾಡ: ಇಲ್ಲಿನ ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಕ್ರೀಡಾಕೂಟದ ಉದ್ಘಾಟಿಸಿದ ಕವಿವಿ ಸಿಂಡಿಕೇಟ್ ಸದಸ್ಯ ಶಂಕರ ಪಾಟೀಲ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನ ನಡೆಸಬಹುದೆಂದು ತಿಳಿಸಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಕ್ರೀಡೆಗಳನ್ನು ಸ್ಪರ್ಧಾ ಮನೋಭಾವನೆಯಿಂದ ತೆಗೆದುಕೊಳ್ಳುವಂತೆ ಮಕ್ಕಳಿಗೆ ಶಿಕ್ಷಕರು ಪ್ರೆರೇಪಣೆ ನೀಡಬೇಕು ಎಂದರು.
ಪ್ರಾಚಾರ್ಯ ಡಾ. ವಿ.ಡಿ. ಬೋಳಿಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು.
ಎಸ್ಬಿಐ ಸಹಾಯಕ ಪ್ರಬಂಧಕ ಲಕ್ಷ್ಮಿ ಭಟ್ ಮಾತನಾಡಿದರು. ಡಾ. ಎಂ.ಎಸ್. ಮನ್ನಿಕೇರಿ ಇದ್ದರು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನೂತನ ತಾಲೂಕಿಗೆ ಗ್ರಾಮಗಳ ಸೇರ್ಪಡೆಗೆ ವಿರೋಧ
ಧಾರವಾಡ: ನೂತನವಾಗಿ ರಚನೆಯಾಗುತ್ತಿರುವ ಅಳ್ನಾವರ ತಾಲೂಕಿಗೆ ನಿಗದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಸೇರ್ಪಡೆ ಮಾಡಬಾರದು ಎಂದು ನಿಗದಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿಗದಿ ಗ್ರಾಪಂ ವ್ಯಾಪ್ತಿಯ ಬೆನಕನಕಟ್ಟಿ, ಸಲಕಿನಕೊಪ್ಪ, ಬಾಡ ಗ್ರಾಮಗಳು ಮತ್ತು ಪಕ್ಕದ ಹಳ್ಳಿಗೇರಿ, ಕಲಕೇರಿ, ಮುಗದ, ದೇವರ ಹುಬ್ಬಳ್ಳಿ ಗ್ರಾಮಗಳು ಧಾರವಾಡದಿಂದ 10 ಕಿ.ಮೀ. ಅಂತರದಲ್ಲಿವೆ. ಆದರೆ, ಅಳ್ನಾವರ ನಿಗದಿ ಗ್ರಾಮದಿಂದ 45 ಕಿ.ಮೀ. ದೂರದಲ್ಲಿದೆ. ಅಲ್ಲದೇ, ಅಳ್ನಾವರಕ್ಕೆ ಹೋಗಲು ಈ ಎಲ್ಲ ಹಳ್ಳಿಗಳಿಂದ ಸಂಚಾರ ಸೌಲಭ್ಯವಿಲ್ಲ. ಆದ್ದರಿಂದ ಈ ಎಲ್ಲ ಹಳ್ಳಿಗಳನ್ನು ಧಾರವಾಡ ತಾಲೂಕಿನಲ್ಲಿ ಉಳಿಸಿಕೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ, ಎಸ್.ಸಿ. ಹಡಪದ, ಎಸ್.ಡಿ. ಪಾಟೀಲ, ಎಂ.ಎಫ್. ಪಾಟೀಲ, ಮಹಾದೇವ ಕಟಗಿ, ಬಿ.ಆರ್. ಹಿರೇಮಠ, ಕಲ್ಲಪ್ಪ ಹಟ್ಟಿ, ಶಿವು ಬೇಲೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

