ಧಾರವಾಡ

ಮಧ್ಯಸ್ಥಗಾರಿಕೆ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ

Published On :

ಹುಬ್ಬಳ್ಳಿ: ಮಧ್ಯಸ್ಥಗಾರಿಕೆ ಮಹತ್ವದ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯಾಗಿದ್ದರೂ ಈ ವ್ಯವಸ್ಥೆ ಕುರಿತು ಜನರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಲ್ಲ ಎಂದು ಹೈಕೋರ್ಟ್  ನ್ಯಾಯಮೂರ್ತಿ ಎನ್. ಕುಮಾರ ಹೇಳಿದರು.
ಶುಕ್ರವಾರ, ರಾಜ್ಯ ಕಾನೂನು ವಿಶ್ವವಿದ್ಯಾಲಯ ಕರ್ನಾಟಕ ಕಾನೂನು ಸಂಸದೀಯ ಸುಧಾರಣೆ ಸಂಸ್ಥೆ ಆಶ್ರಯದಲ್ಲಿ ಮಧ್ಯಸ್ಥಿಕೆ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ನಾವು ಮಧ್ಯಸ್ಥಿಕೆಯ ಕೇಂದ್ರಗಳನ್ನು ನೋಡುತ್ತೇವೆ. ಸಾಮಾನ್ಯ ಜನರಿಗೆ ಅತಿ ಸುಲಭವಾಗಿ ಎಟಕುವ ವ್ಯವಸ್ಥೆ ಇದಾದರೂ ಕೂಡ ಇದರ ಮಹತ್ವದ ಅರಿವು ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ ಎಂದರು.
ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಮಧ್ಯಸ್ಥಿಕೆ ವ್ಯವಸ್ಥೆಯ ಮೂಲಕ ಅಲ್ಲಿನ ಶೇ. 95-96ರಷ್ಟು ಸಿವಿಲ್ ವಿವಾದಗಳು ಪರಿಹಾರವಾಗುತ್ತವೆ. ಆದರೆ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಿವಾದಗಳು ಪರಸ್ಪರ ಸಹಮತದ ಮೂಲಕ ಪರಿಹಾರಗೊಳ್ಳುತ್ತಿಲ್ಲ.  ಆದ್ದರಿಂದ ಈ ವ್ಯವಸ್ಥೆ ಬಲಪಡಿಸುವ ಜವಾಬ್ದಾರಿ ನ್ಯಾಯಾಂಗದಲ್ಲಿ ಸಕ್ರಿಯವಾಗಿರುವವರ ಮೇಲೆ ಇದೆ.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ, ಕಾನೂನು ಕಲಿಕೆ ಮತ್ತು ವಿಷಯದ ಮೇಲೆ ಸಂಪೂರ್ಣ ಜ್ಞಾನವಿದ್ದರೆ ಮಾತ್ರ ಮಧ್ಯಸ್ಥಿಕೆ ಮುಖಾಂತರ ವಿವಾದ ಪರಿಹರಿಸಿ ಎರಡು ಪಕ್ಷದ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದರು.  ಸ್ಕೂಲ್ ಆಫ್ ಲಾ ನಿರ್ದೇಶಕ ಡಾ. ಸಿ. ಎಸ್. ಪಾಟೀಲರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.