ಧಾರವಾಡ

ಶ್ರೀಲಂಕಾದಲ್ಲಿ ರಾಮಾಯಣ ಪ್ರವಾಸಿ ತಾಣಗಳ ದರ್ಶನ

Published On :

ಹುಬ್ಬಳ್ಳಿ: ಶ್ರೀಲಂಕಾದಲ್ಲಿನ 'ರಾಮಾಯಣ' ಪ್ರವಾಸಿ ತಾಣಗಳಿಗೆ ಬೆಂಗಳೂರಿನ ಪ್ರವಾಸ ಸಂಸ್ಥೆ 'ನಾರಾಯಣಿ ಹಾಲಿಡೇಸ್‌' ವತಿಯಿಂದ ಫೆ.22ರಂದು ಪ್ರವಾಸ ಹಮ್ಮಿಕೊಳ್ಳಲಾಗಿದೆ. ಸೀತಾ ಎಲಿಮಾ, ರಾವಣ ಗುಹೆ, ಮನಾನಾರಿ, ಮುನೇಶ್ವರ ಹಾಗೂ ತಿರುಮಣೇಶ್ವರ ಭಕ್ತ ಹನುಮ ದೇವಾಲಯಗಳ ಜೊತೆಗೆ ಭೌದ್ಧ ಮಂದಿರಗಳಿಗೂ ಪ್ರವಾಸಿ ಕೈಗೊಳ್ಳಲಾಗಿದೆ. ಪ್ರತಿ ತಿಂಗಳು ಈ ಸಂಸ್ಥೆ ವತಿಯಿಂದ ಶ್ರೀಲಂಕಾಕ್ಕೆ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಮಾಹಿತಿಗೆ ಮೊ.9945688445 ಅಥವಾ ದೂ.080-42151225/26 ಸಂಪರ್ಕಿಸಲು ಕೋರಲಾಗಿದೆ.

ಪಿಎಸ್‌ಐ ಮೇಲೆ ಮಚ್ಚಿನಿಂದ ಹಲ್ಲೆ
ಸಂತೇಮರಹಳ್ಳಿ:ಹಲ್ಲೆ ತಡೆಯಲು ಮುಂದಾದ ಪಿಎಸ್‌ಐ ಮೇಲೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಗುರುವಾರ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಜನಾರ್ದನ್ ಗಾಯಗೊಂಡಿರುವ ಸಬ್ ಇನ್ಸ್‌ಪೆಕ್ಟರ್. ಬಾಣಹಳ್ಳಿ ಗ್ರಾಮದ ಮಹದೇವ್ ಅಲಿಯಾಸ್ ಅಮಾಸ್ಯೆ ಎಂಬಾತನೇ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ ವ್ಯಕ್ತಿ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಹಾಗೂ ಪಕ್ಕದ ಮನೆ ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಮಹದೇವ್ ಮುಂದಾಗಿದ್ದಾನೆ. ಈ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಜನಾರ್ದನ್ ಅವರು ಹಲ್ಲೆ ತಡೆಯಲು ಮುಂದಾಗಿದ್ದಾರೆ. ಆಗ ಅವರ ಮೇಲೂ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಸಾಲ ಬಾಧೆ: ರೈತ ಆತ್ಮಹತ್ಯೆ
ಜೇವರ್ಗಿ: ಸಾಲ ಬಾಧೆ ತಾಳದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಂಚಿನಾಳ (ಎಸ್.ಎ) ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬಸವರಾಜ್ ಗುರುಪಾದಪ್ಪ ಬಂಕಲಗಿ (40) ಆತ್ಮಹತ್ಯೆಗೆ ಶರಣಾದ ರೈತ. ರೈತನಿಗೆ 5 ಎಕರೆ ಜಮೀನಿದ್ದು, ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ 60 ಸಾವಿರ ಸಾಲ, ಖಾಸಗಿಯಾಗಿ 4 ಲಕ್ಷ ಸಾಲವಿದೆ. ಈ ಕಾರಣ ಮನನೊಂದು ತಮ್ಮ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ರೈತನ ಪತ್ನಿ ಗುರುಬಾಯಿ ಬಸವರಾಜ್ ಬಂಕಲಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.