ಧಾರವಾಡ

ದುಬೈ ಮಾದರಿ ನಾಲೆಡ್ಜ್ ಪಾರ್ಕ್

Published On :

ಧಾರವಾಡ: ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳನ್ನು ಶಿಕ್ಷಣ ಕ್ಷೇತ್ರವೆಂದು ಕರೆಯುತ್ತಿದ್ದು, ದುಬೈನಲ್ಲಿರುವಂತೆ ಇಲ್ಲೊಂದು ನಾಲೆಡ್ಜ್ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದರು.
ಸೋಮವಾರ ನಗರದ ಅಂಜುಮನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗಿಗಳಿಗೆ ಕಾರ್ಪೋರೇಟ್ ಕ್ಷೇತ್ರದಲ್ಲಿ ಉದ್ಯೋಗ ದೊರೆಯುವ ಅವಕಾಶಗಳಿವೆ. ಅವುಗಳಿಗೆ ತಕ್ಕ ಜ್ಞಾನ, ವ್ಯಕ್ತಿತ್ವ ವಿಕಸನ, ಕ್ರಿಯಾಶೀಲತೆ, ಇಂತಹ ಹಲವು ಗುಣಗಳನ್ನು ನೀಡುವಂತಹ ಕಾರ್ಯವನ್ನು ನಮ್ಮ ವಿದ್ಯಾ ಸಂಸ್ಥೆಯು ಮಾಡುತ್ತಿದೆ. ಅಲ್ಲದೇ, ಉದ್ಯೋಗ ಮೇಳಗಳನ್ನು ಆಯೋಜಿಸಿ ನಿರುದ್ಯೋಗಿಗಳಗೆ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಒಂದೇ ದಿನದಲ್ಲಿ 1329 ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಿದ ನಾನು, ಇನ್ನೂ ಅನೇಕ ನಿರುದ್ಯೋಗಿ ಯುವಕರಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಹಾಗೂ ವ್ಯಕ್ತಿತ್ವ ವಿಕಸನ ಬೆಳೆಯುವಂತೆ ಮಾಡುವ ಚಿಂತನೆ ಹೊಂದಿದ್ದೇನೆ. ಈ ಎಲ್ಲ ಆಸೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಪದವೀಧರ ಮತದಾರರು ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲುವಿಗೆ ಸಾಕ್ಷಿಯಾಗಬೇಕೆಂದು ಹೇಳಿದರು. ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಪ್ರಾಚಾರ್ಯ ಪಠಾಣ, ಸಂಗಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಷ್ಠಾವಂತ ಶಿಕ್ಷಕನ ಮಗನಿಗೆ ಮತ ನೀಡಿ
ಹುಬ್ಬಳ್ಳಿ: ನಾನು ರಾಜಕಾರಣಿಯ ಮಗನಾಗಿ ನಿಮ್ಮ ಮುಂದೆ ಬಂದಿಲ್ಲಾ, ನಿಷ್ಠಾವಂತ ಶಿಕ್ಷಕನ ಮಗನಾಗಿ ಬಂದಿದ್ದೇನೆ. ಈವರೆಗೂ  ನಾನು ರಾಜಕಾರಣಿ ಮಗ ಅಥವಾ ಒಬ್ಬ ಮಂತ್ರಿಯ ಮಗನೆಂದು ಗುರುತಿಸಿಕೊಂಡಿಲ್ಲ. ಕಳೆದ ಸುಮಾರು 8-10 ವರ್ಷಗಳಿಂದ ನಾನು ಶಿಕ್ಷಣ ಸೇವೆ ಮಾಡುವ ಮೂಲಕ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿ ವಸಂತ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಎಸ್‌ಜೆಎಂವಿ ಮಹಾಂತ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗಿಗಳಿಗೆ ಕಾರ್ಪೋರೇಟ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಅವಕಾಶಗಳಿವೆ. ಅವುಗಳಿಗೆ ತಕ್ಕಂತಹ ಜ್ಞಾನ, ವ್ಯಕ್ತಿತ್ವ ವಿಕಸನ, ಕ್ರಿಯಾಶೀಲತೆ, ಇಂತಹ ಹಲವು ಗುಣಗಳನ್ನ್ನು ನೀಡುವಂತಹ ಕಾರ್ಯವನ್ನ್ನು ನಮ್ಮ ವಿದ್ಯಾಸಂಸ್ಥೆಯು ಮಾಡುತ್ತಿದೆ. ಉದ್ಯೋಗ ಮೇಳಗಳನ್ನ್ನು ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನ್ನೂ ಹೊಂದಿದ್ದೆನೆ. ಇದಕ್ಕೆ ವೇದಿಕೆ ಕಲ್ಪಿಸಿಕೊಡಲು ತಮಗೆ ಮತ ನೀಡಿ ಎಂದು ಮನವಿ ಮಾಡಿದರು.

ತಂದೆಯಂತೆ ಸೇವೆ ಮಾಡುವೆ
ಧಾರವಾಡ: ಶಿಕ್ಷಕರ ಸೇವೆ ಮಾಡಲು ಇಚ್ಛಿಸಿದ್ದೇನೆಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದ್ದಾರೆ. ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮತದಾರರು ಈ ವರೆಗೆ ನನ್ನ ಶಿಕ್ಷಣದ ಪ್ರೀತಿಯಿಂದ ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಿ. ತಮ್ಮ ಸೇವೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಜೆಡಿಎಸ್ ಮುಖಂಡ ರಾಜಣ್ಣ ಕೊರವಿ ಮಾತನಾಡಿ, ವಸಂತ ಉತ್ಸಾಹಿ ಯುವಕನಾಗಿದ್ದು, ಪದವೀಧರರ ಸಮಸ್ಯೆಗಳನ್ನು ಅರಿತುಕೊಳ್ಳುವಲ್ಲಿ ಮತ್ತು ಬಗೆಹರಿಸುವಲ್ಲಿ ಪ್ರಯತ್ನ ಮಾಡಲಿದ್ದಾರೆ. ಈ ಚುನಾವಣೆಯಲ್ಲಿ ವಸಂತ ಅವರನ್ನು ಬೆಂಬಲಿಸಿ ಎಂದರು. ಜಿ.ಆರ್. ಭಟ್, ಕೃಷಿ ವಿವಿ ಕುಲಪತಿ ಡಾ. ಡಿ.ಪಿ. ಬಿರಾದಾರ, ಜಿ.ಎಸ್. ದಾಸೋಗ, ಕುಲಸಚಿವ ಭೀಮನಗೌಡ ಹೊಸಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.