ಸಾಹಿತ್ಯದಿಂದ ಹೊಸ ದೃಷ್ಟಿಕೋನ ಮೂಡಲಿ: ನಾಡಗೌಡ ಆಶಯ
ಧಾರವಾಡ: ಹೊಸ ದೃಷ್ಟಿಕೋನದಿಂದ ರಾಷ್ಟ್ರದೃಷ್ಟಿ, ಸಾಮಾಜಿಕ ಭಾವನೆ ಕಳಕಳಿಯಿಂದ ಬದುಕು ನೋಡಬೇಕಿದೆ. ಇದಕ್ಕೆ ಪೂರಕವಾಗಿ ಸಾಹಿತ್ಯ ನಿರ್ಮಿಸೋಣ, ಕನ್ನಡ ನಾಡಿನಿಂದ, ಕನ್ನಡಿಗರಿಂದ ಇಂತಹ ಕೆಲಸವಾಗಲಿ...
ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಮೂಗಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಅವರ ನುಡಿಗಳಿವು.
ದೇಶದ ಇತಿಹಾಸದಲ್ಲಿ ಬಹಳ ಹಿಂದೆ ಮೂಡಿದ ತಪ್ಪು ಗ್ರಹಿಕೆಗಳು, ಕೆಟ್ಟ ಆಡಳಿತದಿಂದಾಗಿ ಸಮಾಜದಲ್ಲಿ ಅಸಮಾನತೆ, ಭೇದ-ಭಾವಗಳು-ದೇಶದ ಜನರ ಜೀವನವನ್ನು ಬಹಳ ಕೆಳಮಟ್ಟದಲ್ಲಿರಿಸಿವೆ. ಅವರೆಲ್ಲ ಅವಕಾಶ ವಂಚಿತರು. ತಮ್ಮ ಹಕ್ಕು ಸಹಿತ ಕೇಳಲು ಸಾಧ್ಯವಾಗದಷ್ಟು ಅಶಿಕ್ಷಿತರು. ಇಂತಹ ಜನರ ಜೀವನದ ಬಗೆಗೆ ನಮ್ಮಲ್ಲಿ ಎಷ್ಟು ಸಾಹಿತ್ಯ ಬಂದಿದೆ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿರುವ ಶಿಕ್ಷಕರೆಲ್ಲ ಸೇರಿ ಯೋಜನೆ ಹಾಕಿಕೊಂಡು 4-5 ಸಾರ್ವಕಾಲಿಕ ಶ್ರೇಷ್ಠ ಸಾಹಿತ್ಯ ಕೃತಿಗಳ ಜತೆಗೆ ಅಷ್ಟೇ ಸಂಖ್ಯೆಯ ಸಮಕಾಲೀನ ಸಾಹಿತ್ಯ ಕೃತಿಗಳನ್ನು ಪ್ರತಿವರ್ಷ ಓದಬೇಕು. ಈ ಓದಿನಿಂದ ವಾಸ್ತವ ಬದುಕು ಹಾಗೂ ವಾಸ್ತವ ಬದುಕಿನ ಬಗೆಗಿನ ಚಿಂತನೆಗಳಿಂದ ಕೂಡಿದ ಸೃಜನಶೀಲ ಸಾಹಿತ್ಯದ ನಡುವಿನ ಅನಿವಾರ್ಯ ಹಾಗೂ ಅವಶ್ಯಕ ಸಂಬಂಧ ಲಕ್ಷ್ಯಕ್ಕೆ ಬಾರದಿರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

