ಧಾರವಾಡ

ವಿಶ್ವರಂಗ ದಿನಾಚರಣೆ: ಇಂದಿನಿಂದ ನಾಟಕೋತ್ಸವ

Published On :

ಧಾರವಾಡ: ವಿಶ್ವರಂಗ ದಿನಾಚರಣೆ ಅಂಗವಾಗಿ ರಂಗ ಪರಿಸರದಿಂದ ಅಮೀರಬಾಯಿ ಕರ್ನಾಟಕಿ ಜನ್ಮಶತಮಾನೋತ್ಸವದ ಅಂಗವಾಗಿ ವಿದ್ಯಾವರ್ಧಕ ಸಂಘದಲ್ಲಿ ಮಾ. 23ರಿಂದ 27ರ ವರೆಗೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಕೆ.ಎಚ್. ನಾಯಕ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕೋತ್ಸವದಲ್ಲಿ ರಂಗ ನುಡಿ, ರಂಗ ಗೌರವ, ರಂಗಸಿರಿ ಪ್ರಶಸ್ತಿಗಳನ್ನು ರಂಗ ಕಲಾವಿದರಿಗೆ  ನೀಡಲಾಗುವುದು. ಮಾ.23ರಂದು ಸಂಜೆ 5.30ಕ್ಕೆ ಡಾ. ರಹಮತ್ ತರೀಕೆರೆ ಉದ್ಘಾಟಿಸುವರು. ಸಾಹಿತಿ ಡಾ.ಬಾಳಣ್ಣ ಶಿಗೀಹಳ್ಳಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸುಜಾತಾ ಜಂಗಮಶೆಟ್ಟಿ, ಪ್ರತಾಪ ಬಹರೂಪಿ, ಕೆ. ಜಗುಚಂದ್ರ ಕೂಡ್ಲ, ಎನ್.ಎಂ. ದಾಟನಾಳ ಆಗಮಿಸುವರು. ಕಲಾವಿದರಾದ ದಿ.ಸಿ.ಆರ್. ಸಿಂಹ, ದಿ. ಜಗದೀಶ ರೊಟ್ಟಿಮಠ, ದಿ. ಮುದಿಮಲ್ಲಪ್ಪ ಬಂದನ್ನವರ ಅವರಿಗೆ ರಂಗಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದರು. ಸಮಾರಂಭದ ನಂತರ ದೇವರ ಹುಬ್ಬಳ್ಳಿಯ ರಂಗಸಂಗ ತಂಡ ಕೊನೆಯ ನಮಸ್ಕಾರ ನಾಟಕ ಪ್ರಸ್ತುತಪಡಿಸಲಿದೆ.
ಮಾ.24 ರಂದು ವಿಶ್ವನಾಥ ಕುಲಕರ್ಣಿ ಹಾಗೂ ಬಿ.ಐ.ಈಳಿಗೇರ ಅವರಿಗೆ ರಂಗ ಸನ್ಮಾನ ನಡೆಯಲಿದೆ. ಈ ಸಂದರ್ಭದಲ್ಲಿ ಇಲ್ಲಿಯ ಕಲಾದರ್ಶಿ ತಂಡದಿಂದ ನನಗ್ಯಾಕೋ ಡೌಟು ನಾಟಕ ನಡೆಯಲಿದೆ. ಮಾ.25 ರಂದು ರಂಗನ್ನವರ ಲೋಕಾಪುರ ಹಾಗೂ ಅನಂತ ತಿಟೆಯವರನ್ನು ಸನ್ಮಾನಿಸಲಿದ್ದು, ಹಾರೋಬೆಳವಡಿಯ ಮಲ್ಲಯ್ಯ ನಾಟ್ಯ ಸಂಘದಿಂದ ಸಂಗ್ಯಾ-ಬಾಳ್ಯಾ ನಾಟಕ ಜರುಗಲಿದೆ. 26 ರಂದು ಮಹಿಳಾ ರಂಗ ಸಂಗೀತ ಉಪನ್ಯಾಸ ಜರುಗಲಿದ್ದು ವತ್ಸಲಾ ಕುಲಕರ್ಣಿ ಹಾಗೂ ಲಲಿತಮ್ಮ ರವರಿಗೆ ಸನ್ಮಾನ ನಡೆಯಲಿದೆ. ಊರು ಸುಟ್ಟರೂ ಹನಮಪ್ಪ ಹೊರಗ ನಾಟಕವು ಆಟ ಮಾಟ ತಂಡ ಪ್ರಸ್ತುತಪಡಿಸಲಿದೆ. ಇನ್ನು, 27 ರ ಸಂಜೆ 5.30 ಕ್ಕೆ ಸಮಾರೋಪ ಹಾಗೂ ರಂಗಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಅತಿಥಿಗಳಾಗಿ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ, ಪ್ರೊ. ಚಂದ್ರಕಾಂತ ಪೋಕಳೆ, ವಿಠಲ ಕೊಪ್ಪದ ಆಗಮಿಸುವರು. ರಂಗಸಿರಿ ಪ್ರಶಸ್ತಿಯನ್ನು ಸರ್ಜಾಪೂರದ ಶಿವಶಂಕರ ಹಾಲಕುರ್ಕಿಯವರಿಗೆ ನೀಡಲಾಗುವುದು. ಕೃಷ್ಣ ಪಾರಿಜಾತ ನಾಟಕ ಪ್ರದರ್ಶನಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.