ಸಮಾಜ ಜಾಗೃತಿಯೂ ದೇಶ ಪ್ರೇಮವೆ: ಗೋವಿಂದ ಭಟ್
ಅಳ್ನಾವರ: ದೇಶಪ್ರೇಮ ಸಾಬೀತುಪಡಿಸಲು ಗಡಿಗಳಲ್ಲಿ ಯುದ್ಧವನ್ನೇ ಮಾಡಬೇಕಿಲ್ಲ. ನಾವಿರುವ ಊರಿನಲ್ಲಿಯೇ ಸಮಾಜಕ್ಕೆ ಅಗತ್ಯವಿರುವ ಜಾಗೃತಿ ಮೂಡಿಸುವುದೂ ದೇಶಪ್ರೇಮವೇ ಎಂದು ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಬಿ. ಗೋವಿಂದ ಭಟ್ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಇಂದು ಯುವಜನಾಂಗ ಮತದಾರರಲ್ಲಿ ಜಾಗೃತಿಯನ್ನುಂಟು ಮಾಡುವ ಅಭಿಯಾನವನ್ನು ಕೈಕೊಂಡರೆ ಅದಕ್ಕಿಂತ ದೇಶಭಕ್ತಿ ಮತ್ತೊಂದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದು, ಹೆಸರು ನೋಂದಾಯಿಸಲು ಪ್ರೆರೇಪಿಸುವುದು, ಕಡ್ಡಾಯವಾಗಿ ತಾವು ಮತದಾನ ಮಾಡಿ ಮತದಾನ ಮಾಡಲು ಮತದಾರರನ್ನು ಜಾಗೃತಗೊಳಿಸುವುದು, ಅರ್ಹರಿಗೆ ಮತ ನೀಡುವುದು ಮತ್ತು ಆ ಎಚ್ಚರವನ್ನು ಸಮಾಜಕ್ಕೆ ನೀಡುವುದರ ಯುವಜನಾಂಗ ದೇಶ ಸೇವೆ ಮಾಡಬೇಕಿದೆ ಎಂದರು. ಡಾ. ಉಮಾಪತಿ ಕೆ.ಎಲ್., ಎಲ್ಲ ಹಂತದಲ್ಲೂ ಯುವ ಜನಾಂಗ ಜಾಗೃತಿ ಅಭಿಯಾನದಲ್ಲಿ ಕೈಗೂಡಿಸಬೇಕು. ಈ ಚುನಾವಣೆಗೆ ಸುಮಾರು 9 ಕೋಟಿ ಹೊಸ ಮತದಾರರು ನೋಂದಣಿಯಾಗಿದ್ದು, ಅವರು ಮತದಾನದ ಜಾಗೃತಿ ಪಡೆಯಬೇಕು. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಮಾಡುವ ಮತ್ತು ಮತದಾನ ಮಾಡಿಸುವ ಮೂಲಕ ಶ್ರಮಿಸಬೇಕು ಎಂದರು. ಧಾರವಾಡ ಜಿಲ್ಲಾ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಎ.ಜಿ. ಪುರಾಣಿಕ, ಪ್ರಾಂಶುಪಾಲ ಬಿ.ಎ. ಪಾಟೀಲ, ಗೀತಾ ಬೋಗಾರಂ, ಬಿ.ಆರ್. ಕೇತನಕರ, ಡಾ.ಎಂ.ಡಿ. ವಕ್ಕುಂದ, ಶ್ರೀಪಾಲ ಕುರಕುರ್ಣಿ ಇದ್ದರು. ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಎಂಬ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರತಿಯೊಬ್ಬರೂ ಮತ ಚಲಾಯಿಸಿ: ಎ.ಡಿ. ಗೋಕಾವಿ
ಕುಂದಗೋಳ: ಪ್ರಜಾಪ್ರಭುತ್ವದ ಉಳಿವಿಕೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಗುಡಗೇರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎ.ಡಿ. ಗೋಕಾವಿ ಹೇಳಿದರು. ತಾಲೂಕಿನ ಗುಡಗೇರಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಅರಿವು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಕೊಡುಗೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಬಿ. ಪಂಚಾಕ್ಷರಯ್ಯ, ದೇಶದ ಸಾರ್ವತ್ರಿಕ ಕಲ್ಯಾಣ ಹಾಗೂ ಸುಭದ್ರ ಭಾರತನಿರ್ಮಾಣಕ್ಕಾಗಿ ನಾವು ಮತದಾನ ಮಾಡಬೇಕು. ಇದು ನಮ್ಮ ಕೈಯಲ್ಲಿದೆ ಎಂದರು. ಎ.ಕೆ. ಜಮಾದಾರ, ಪಿ.ಎಫ್. ತಿಮ್ಮನಗೌಡ್ರ, ಭರಮಗೌಡ್ರ ಸಿ.ಎಸ್. ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ದೀಪಾ ಪೂಜಾರ ಹಾಗೂ ಸಿದ್ದರಾಮಪ್ಪ ಹದ್ಲಿ, ಡಾ.ಎಸ್.ಆರ್. ಶಿರಹಟ್ಟಿ, ವೈ.ಎಚ್. ಭೀರಣ್ಣವರ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

