ಶಿಕ್ಷಣದಿಂದ ಸಾಮರ್ಥ್ಯ ವೃದ್ಧಿ: ರಾಮಣ್ಣ
ಧಾರವಾಡ: ಮನುಷ್ಯ ನಿತ್ಯ ಮಾಡುವ ಎಲ್ಲ ಕೆಲಸಗಳಿಗೂ ಶಿಕ್ಷಣವೇ ದಿವ್ಯ ಶಕ್ತಿ. ಶಾಲೆಗಳು ಬೆಳೆದರೆ ಸಾಮರ್ಥ್ಯ ಬೆಳೆಯುತ್ತದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಸೌಹಾರ್ದ ಅರ್ಬನ್ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖಾ ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ ಹೇಳಿದರು.
ತಾಲೂಕಿನ ಹಾರೋಬೆಳವಡಿ ಗ್ರಾಮದ ಎಲಿಗೆಂಟ್ ಲೋಟಸ್ ಪೆಟಲ್ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಕ್ಷರಸ್ಥರಿಂದಲೇ ಗ್ರಾಮ, ನಗರ, ದೇಶ ಅಭಿವೃದ್ಧಿ. ಈ ಹಿನ್ನೆಲೆಯಲ್ಲಿ ಎಲ್ಲರೂ ಸುಶಿಕ್ಷಿತರಾಗಬೇಕೆಂದು ಹೇಳಿದರು.
ಮಂಡಳ ಪಂಚಾಯಿತಿಯ ಮಾಜಿ ಉಪಪ್ರಧಾನ ಮಲ್ಲನಗೌಡ ಪಾಟೀಲ ಮಾತನಾಡಿ, ಇಂದು ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿರುವುದರಿಂದ ಭಾರತದ ಪ್ರತಿಯೊಬ್ಬ ಪ್ರಜೆಗೂ ವಿದ್ಯಾರ್ಜನೆಯ ಮೂಲಭೂತ ಹಕ್ಕಿದೆ. ಎಲ್ಲರೂ ಶಿಕ್ಷಣವಂತರಾದರೆ ಮಾತ್ರ ದೇಶದ ಸಾಧ್ಯ ಎಂದರು. ನಿವೃತ್ತ ಹಿಂದಿ ಅಧ್ಯಾಪಕ ವಾಸುದೇವ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಶಿವನಗೌಡ ಪಾಟೀಲ, ನಾಗಪ್ಪ ಸಂಕದ, ನಿಂಗನಗೌಡ ದೇಸಾಯಿ, ರೂಪಾ ಮುಶಿನಗೌಡರ, ಈರಪ್ಪ ಪಾರ್ವತಿ, ಸೌಮ್ಯ ಪಾಟೀಲ ಇದ್ದರು. ನವನೀತಾ ದೊಡ್ಡಮನಿ ಸ್ವಾಗತಿಸಿದರು. ಉಲ್ಲಾಸ ದೊಡ್ಡಮನಿ ನಿರೂಪಿಸಿದರು. ಸ್ನೇಹಿತದೇವ ದೊಡ್ಡಮನಿ ವಂದಿಸಿದರು. ಅನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಣಕು ನ್ಯಾಯಾಲಯ ಸ್ಪರ್ಧೆ: ಲಾ ಸ್ಕೂಲ್‌ಗೆ ಪ್ರಥಮ ಸ್ಥಾನ
ಹುಬ್ಬಳ್ಳಿ: ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಈಚೆಗೆ ಜರುಗಿದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಲಾ ಸ್ಕೂಲ್ ಪ್ರಥಮ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೇರಳದ ಲಾ ಅಕಾಡೆಮಿ ವಿರುದ್ಧ ನಡೆದ ಅಂತಿಮ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಲಾ ಸ್ಕೂಲ್‌ನ ವಿದ್ಯಾರ್ಥಿಗಳಾದ ಶಾನೆಲ್ ಪುನ್ನೂಸ್, ಮೇಘಾ ಸವಣೂರ್ ಮತ್ತು ಅಲೋಕ್ ಜಿ.ಎಸ್. ಅವರನ್ನ್ನು ಒಳಗೊಂಡ ತಂಡ ಗೆಲವು ಸಾಧಿಸಿತು. ದೇಶದ ನಾನಾ ಭಾಗಗಳಿಂದ 24 ತಂಡ ಭಾಗವಹಿಸಿದ್ದವು. ವಿಜೇತರಿಗೆ ನ್ಯಾ. ಎಸ್.ಆರ್. ಬನ್ನೂರಮಠ, ಡಾ. ಬಿ. ಆಚಾರ್ಯ, ಪ್ರೊ. ಕುಟಿನ್ಹೊ ಪಾರಿತೋಷಕ ನೀಡಿ ಗೌರವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

