ಧಾರವಾಡ

ಶೈಲೇಶ್ವರಮಠಕ್ಕೆ ಉತ್ತರಾಧಿಕಾರಿ ಹುಡುಕಾಟ

Published On :

ಕಲಘಟಗಿ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಸಿದ್ಧಲಿಂಗ ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿರುವ ಬು. ಹೂಲಿಕಟ್ಟಿ ಗ್ರಾಮಸ್ಥರು ಇದೀಗ ಶೈಲೇಶ್ವರ ಮಠಕ್ಕೆ ಉತ್ತರಾಧಿಕಾರಿ ಹುಡುಕಾಟದಲ್ಲಿ ತೊಡಗಿದ್ದಾರೆ.
ಮಂಗಳವಾರ ಶೈಲೇಶ್ವರ ಮಠದಲ್ಲಿ ತುರ್ತುಸಭೆ ಕರೆದಿದ್ದ ಸುತ್ತಲಿನ ಗ್ರಾಮಗಳ ಹಿರಿಯರು, ಭಕ್ತರು ಮಠದ ಮೂಲಪುರುಷ ಶ್ರೀಜಟಾಧಾರಿ ಸ್ವಾಮಿಗಳ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದ ಮಠವನ್ನು ಉಳಿಸಿ ಬೆಳೆಸಿದ್ದನ್ನು ನೆನಪಿಸಿಕೊಂಡರು.
ಉಂಡು ಹೋದ ಕೊಂಡೂ ಹೋದ ಎನ್ನುವಂತೆ ಈ ಸ್ವಾಮಿಯ ಅನೈತಿಕತೆ ಕುರಿತು ಸಿಡಿಮಿಡಿಗೊಂಡರು.
ಸ್ವಾಮಿಗಳ ಹೆಸರಿನಲ್ಲಿರುವ ಬ್ಯಾಂಕುಗಳ ಖಾತೆಯಲ್ಲಿ ಹಣ, ಇನ್ನಿತರೆ ದಾಖಲಾತಿಗಳನ್ನು ಸಂಗ್ರಹಿಸಲು ಮುಂದಾದ ಸಂದರ್ಭವೂ ನಡೆಯಿತು.
ಈಗಾಗಲೇ ಸುದ್ದಿಯನ್ನು ತಿಳಿದ ಭಕ್ತಜನರು, ಕೆಲ ಮಠಾಧೀಶರುಗಳು ಅಸಮಾಧಾನ ಹಾಗೂ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾನೂ ಉತ್ತರಿಸಲಾರೆ ಎಂದು ಸ್ಥಳೀಯ ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಪ್ರತಿಕ್ರಿಯಿಸಿದ್ದಾರೆ.
ತಬಕದಹೊನ್ನಿಹಳ್ಳಿ ಗ್ರಾಮದ ಜಿ.ಪಂ.ಸದಸ್ಯ ಬಸವರಾಜ ಕರಡಿಕೊಪ್ಪ, ಇಂತ ಕಳ್ಳ ಸ್ವಾಮಿಗಳು ಮಠದಾಗ್ ಇರಬಾರದು. ಮಠದ ಇತಿಹಾಸಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಈ ಮಠದ ಭಕ್ತನಾದ ನಾನು ವೈಯಕ್ತಿಕ ನೆರವು, ಸೇವೆ, ಸರ್ಕಾರದ ನೆರವು ಸ್ಮರಿಸಿ ಸಿದ್ಧಲಿಂಗ ಸ್ವಾಮಿಯ ಅನಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸ್ವಾಮಿಗಳನ್ನು ಹಾಗೆಯೇ ಬಿಟ್ಟದ್ದು ಸರಿಯಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.