ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ
ಹುಬ್ಬಳ್ಳಿ: ಅತ್ಯಾಚಾರ ಎಸಗಿ ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿಯಿಂದ ನ್ಯಾಯ ಕೊಡಿಸುವಂತೆ ಗರ್ಭಿಣಿಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಇಲ್ಲಿಯ ಕೇಶ್ವಾಪುರದ ನಿವಾಸಿ 23 ವರ್ಷದ ಸಾಧನಾ (ಹೆಸರು ಬದಲಾಯಿಸಲಾಗಿದೆ) ಇದೀಗ 7 ತಿಂಗಳ ಗರ್ಭಿಣಿ.
ಈಕೆಗೆ ಪರಿಚಯವಿದ್ದ ವೀರೇಂದ್ರ ಯಾದವ್ ಎಂಬಾತ ಕಳೆದ 7 ತಿಂಗಳ ಹಿಂದೆ ಈಕೆಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಳಗಿನಜಾವ ಬಲಾತ್ಕಾರ ಮಾಡಿದ್ದ. ನಂತರ ಸಾಧನಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಹೊರಗಡೆ ವಿಷಯ ತಿಳಿದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.
ನಂತರ ದಿನಗಳಲ್ಲಿಯೂ ಈಕೆಯನ್ನು ಹೆದರಿಸಿ ಅತ್ಯಾಚಾರ ಎಸಗಿದ್ದನೆಂದು ದೂರಲಾಗಿದೆ. 7 ತಿಂಗಳ ಗರ್ಭಿಣಿಯಾಗಿರುವ ಸಾಧನಾಳೊಂದಿಗೆ ವಿವಾಹವಾಗಲು ವೀರೇಂದ್ರ ನಿರಾಕರಿಸುತ್ತಿದ್ದಾನೆ. ತನಗೆ ನ್ಯಾಯ ಕೊಡಿಸುವಂತೆ ಕೋರಿ ಇದೀಗ ಸಾಧನಾ ನಗರದ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ.
ಅನಾಥ ಶವ: ನಗರದ ರೈಲು ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧನೊಬ್ಬ ಇತ್ತೀಚೆಗೆ ಕಿಮ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ. 60 ವರ್ಷದ ವೃದ್ಧ 5.4 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಅರ್ಧ ಬೋಳು ತಲೆ ಇರುವ ಈತ, ಬಾದಾಮಿ ಬಣ್ಣದ ಖಾಕಿ ಗೆರೆಯುಳ್ಳ ಫುಲ್ ಶರ್ಟ್, ತಿಳಿ ಖಾಕಿ ಬಣ್ಣದ ಬಿಳಿ ಗೆರೆಯುಳ್ಳ ಪ್ಯಾಂಟ್ ಧರಿಸಿದ್ದಾನೆ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಪರಿಚಿತರು ಹಾಗೂ ಸಂಬಂಧಿಕರು ಇದ್ದಲ್ಲಿ ದೂ. 0836 2364751 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

