ಸದಾಚಾರದಿಂದ ಸುಖ-ಶಾಂತಿ: ಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಜೂ. 29
ಸುಖ-ಶಾಂತಿ ಸಮೃದ್ಧಿಯ ಜೀವನ ನಡೆಸಬೇಕಾದರೆ, ಸದಾಚಾರ-ಸದ್ವಿಚಾರಗಳ ಸಂಗಮವಾಗಿರಬೇಕು ಎಂದು ಸೂಡಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಈಚೆಗೆ ನಗರದ ಜ. ಪಂಚಾಚಾರ್ಯ ಮಂದಿರದಲ್ಲಿ ಪಂಚಾಚಾರ್ಯ ಸೇವಾ ಸಂಘ ಗದಗ-ಬೆಟಗೇರಿ ಹಾಗೂ ಯುವಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮೃತ ವಾಹಿನಿ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬಿ.ಎಸ್. ಪಾಟೀಲ, ಚಂದ್ರು ಬಾಳೆಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಹಿರೇಮಠ ಗುರೂಜಿ ಜಾಗ್ರತ ಮನಸ್ಸು ಮತ್ತು ಸುಪ್ತ ಮನಸ್ಸು ವಿಷಯವಾಗಿ ಪ್ರಾತ್ಯಕ್ಷಿಕೆ ಉಪನ್ಯಾಸ ನೀಡಿದರು. ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಬಸಣ್ಣ ಮಲ್ಲಾಡದ, ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ, ಮಂಜುನಾಥ ಬೇಲೇರಿ, ಅನೀಲ ಅಬ್ಬಿಗೇರಿ, ವಿಜಯಕುಮಾರ ಹಿರೇಮಠ, ಬಾಬಣ್ಣ ಶಾಬಾದಿಮಠ, ಶಿವಲೀಲಾ ಕುರುಡಗಿ, ಶಾರದಾ ಹಿರೇಮಠ, ಗಿರಿಜಾದೇವಿ ಹಿರೇಮಠ, ಸುರೇಶ ಅಬ್ಬಿಗೇರಿ, ರವಿ ದುಂಡಸಿ, ಮಲ್ಲಿಕಾರ್ಜುನ ಶಿಗ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಶಿದ್ದವೀರ ಶಾಸ್ತ್ರಿ ವೇದಘೋಷವನ್ನು ನೆರವೇರಿಸಿದರು. ಬೇಲಿ ಪ್ರಕಾಶ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

