ಮಳೆಗಾಗಿ ಗುರ್ಜಿ ಪೂಜೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 30
ಪಟ್ಟಣದ ಬಸ್ತಿಕೇರಿ ಓಣಿಯ ರೈತರು ಹಲವಾರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆಗಾಗಿ ಗುರ್ಜಿ ಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡಿದರು.
ಒಂದು ತಿಂಗಳಿಂದ ಮಳೆಯು ಭೂಮಿಯತ್ತ ಮುಖ ಮಾಡದೆ ಬಿತ್ತಿದ ಬೀಜಗಳು ಮೊಳಕೆಯೊಡೆಯುತ್ತಿಲ್ಲ. ಬೆಳೆದ ಬೆಳೆಗಳು ಅಲ್ಲೇ ಕಮರಿ ಹೋಗುತ್ತಿವೆ. ಹೀಗಾದರೆ ರೈತ ಸಮೂಹ ದೇವರ ಮೊರೆ ಹೋಗುತ್ತಿದೆ.
ಪಟ್ಟಣದ ಬಸ್ತಿಕೇರಿಯ ಯುವಕರು ಹಾಗೂ ಹಿರಿಯರು ಸೇರಿಕೊಂಡು ಬರಮದೇವರ ಕಟ್ಟೆಯ ಹತ್ತಿರ ಮಳೆಗಾಗಿ ಗುರ್ಜಿ ಪೂಜೆ ಮಾಡಿ ಆನಂತರ ಅನ್ನ ಸಂತರ್ಪಣೆ ಮಾಡುವ ಮೂಲಕ ಮಳೆದೇವನನ್ನು ಪೂಜಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಗುರುಪುತ್ರಪ್ಪ ಮೆಡ್ಲೇರಿ, ಅಶೋಕ ಹೊಂಗಲ, ಮಂಜುನಾಥ ಉಮಚಗಿ, ಕಳಕಪ್ಪ ಉಮಚಗಿ, ನೀರಾಲೋಟಿ, ಪ್ರಕಾಶ ಮೆಣಸಿನಕಾಯಿ, ಈರಣ್ಣ ಉಮಚಗಿ, ಪರಮೇಶ್ವರ ಅತ್ತಿಕಟ್ಟಿ ಮತ್ತಿತರರು ಹಾಜರಿದ್ದರು.
ಕೃಷಿ ವಿಮೆ ಅವಧಿ ವಿಸ್ತರಣೆ
ಗದಗ: ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿಮೆ ತುಂಬುವ ದಿನಾಂಕವನ್ನು ರೈತರ ಅನುಕೂಲಕ್ಕಾಗಿ ಜುಲೈ 31 ರ ವರೆಗೆ ವಿಸ್ತರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

