14ರವರೆಗೆ ಶರಣಬಸವೇಶ್ವರ ಪುರಾಣ
ಗುಲ್ಬರ್ಗ: ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಗರೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆರಂಭವಾದ ಗುಲ್ಬರ್ಗ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಏ.14ರವರೆಗೆ ನಡೆಯಲಿದೆ. 14ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, 15ರಂದು ರಾತ್ರಿ 9 ಗಂಟೆಗೆ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 16ರಂದು ಬೆಳಗ್ಗೆ 4 ಗಂಟೆಗೆ ಅಗ್ನಿಪ್ರವೇಶ ಹಾಗೂ ಪುರವಂತರ ಸೇವೆ, 8 ಗಂಟೆಗೆ ಜಾತ್ರಾ ಮಹೋತ್ಸವ ಮಹಾಮಂಗಲಗೊಳ್ಳುತ್ತದೆ ಎಂದು ವೀರಭದ್ರೇಶ್ವರ ಟ್ರಸ್ಟ್(ಬಿ) ಕಾರ್ಯದರ್ಶಿ ಬಿ.ಎನ್. ಪಾಟೀಲ್ ತಿಳಿಸಿದ್ದಾರೆ. ಧುತ್ತರಗಾಂವ ಶಿವಕುಮಾರ ಶಾಸ್ತ್ರೀಗಳು ಪುರಾಣ ನಡೆಸಲಿದ್ದಾರೆ. ಚಿಮಣಗೇರಾ ಶಿವಲಿಂಗಸ್ವಾಮಿ ಗವಾಯಿಗಳು ಸಂಗೀತ ಸೇವೆ ನೀಡಲಿದ್ದಾರೆ. ಮಹಾಂತೇಶ ಹರವಾಳ ತಬಲಾ ಸಾಥ್ ನೀಡುವರು. ಏ.13ರಂದು ಗುಲ್ಬರ್ಗ ಮಠದ ಶಿವರುದ್ರಯ್ಯ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಏ.14ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ನೇತೃತ್ವ ವಹಿಸಲಿದ್ದಾರೆ. ಚನ್ನಮಲ್ಲೇಶರ ಶಿವಾಚಾರ್ಯ, ಮಹಾಂತೇಶ ಸಂಸ್ಥಾನ ಮಠದ ಸಿದ್ಧರಾಮ ಶಿವಾಚಾರ್ಯ, ಸಿದ್ದಲಿಂಗ ಶಿವಾಚಾರ್ಯ, ಸಿದ್ದಮಾಂಬೆ ಶಿವಶರಣೆ, ಸಂದೀಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರು ಇರುವರು. ಅಫಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಎಂ.ವೈ. ಪಾಟೀಲ್, ಅನಿತಾ ಪವನ ವಳಕೇರಿ, ನಾಗನಗೌಡ ಪಾಟೀಲ್ ತೇಗನೂರ, ಷಣ್ಮುಖಪ್ಪ ಬಿ. ಸಿಬರಬಂಡಿ, ಅನ್ನಪೂರ್ಣ ಗೋವಿಂದರೆಡ್ಡಿ, ಮಲ್ಲಿಕಾರ್ಜುನ ಸಿದ್ದಣ್ಣ ಮೇಳಕುಂದಿ, ಕೃಷ್ಣಾಬಾಯಿ ಶೆಟ್ಟೆಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

