'ಸಂಗೀತ ದೈವದಂತೆ ಎಂದಿಗೂ ಅಮರ'
ಕನ್ನಡಪ್ರಭ ವಾರ್ತೆ, ಸೇಡಂ, ಏ. 7
ಸಂಗೀತದ ಹುಟ್ಟು ದೈವೀ ಗುಣಗಳ ಜತೆಗೆ ಹುಟ್ಟಿದೆ. ಅದಕ್ಕೆ ಸಾವಿಲ್ಲ ಎಂದು ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ ಪ್ರತಿಪಾದಿಸಿದರು. ಇಲ್ಲಿನ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಶಾರದಾ ಸಂಗೀತ ಪಾಠಶಾಲೆಯ 4ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಂಗೀತವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಗ್ರಾಮೀಣ ಜನರಲ್ಲಿ ಅಡಗಿರುವ ಸಂಗೀತ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರ ಹೊರಬೇಕು. ಆಗ ಮಾತ್ರ ಭಾರತೀಯ ಸಂಗೀತಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದರು.
ಕಲೆಗೆ ಬೆಲೆ: ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ದೇವರು ಸಂಗೀತ ರೂಪದಲ್ಲಿ ಜನರಲ್ಲಿ ನೆಲೆಸಿದೆ. ಅದನ್ನರಿತು ಕಲೆಗೆ ಬೆಲೆ ನೀಡಬೇಕು. ದೇವರಿಲ್ಲದ ಕಲೆಗೆ ಬೆಲೆಯಿಲ್ಲ ಎಂದರು.
ವಾಸವದತ್ತಾ ವಿದ್ಯಾವಿಹಾರ ಶಾಲೆಯ ಉಪ ಪ್ರಾಂಶುಪಾಲೆ ಸುನಿತಾ ಪಿ. ಕುಲಕರ್ಣಿ, ವೈದ್ಯ ಡಾ. ಮುರಳಿಧರ್ ದೇಶಪಾಂಡೆ ಮತ್ತು ಪದ್ಮಾ ಶ್ರೀನಿವಾಸ ಸವಾಯಿ ಮಾತನಾಡಿದರು. ಶಾರದಾ ಸಂಗೀತ ಶಾಲೆಯ ಮಕ್ಕಳು ಹಾಡಿದ, ಬೆಣ್ಣೆ ಕದ್ದಿಲ್ಲಮ್ಮ ಎಂಬ ಹಾಡು ನೆರೆದಿದ್ದ ಜನರ ಮನಸೂರೆಗೊಂಡಿತು.
ಉಪಸ್ಥಿತಿ: ಅಂಜನಾ ಭೋವಿ, ರಾಜೇಶ್ವರಿ ಪಂಚಾಳ, ಶಿವಲೀಲಾ ನಿಡಗುಂದಾ, ಮಹಾನಂದಾ, ಸಿಂಧು ನಾಯ್ಕ, ಶಶಿಕಲಾ, ಪ್ರಿಯಾಂಕಾ ಕುಲಕರ್ಣಿ, ಲಲಿತಾ ಕೋಕಟ ತರಾನಾ ಸಂಗೀತ ಪ್ರಸ್ತುತಪಡಿಸಿದರು. ಮನೋಹರ ವಿಶ್ವಕರ್ಮ, ಶ್ರೀಶೈಲ್ ವಿಶ್ವಕರ್ಮ ಹಾರ್ಮೋನಿಯಂ ನುಡಿಸಿದರು. ದೇವರಾಜ ಭೋವಿ ತಬಲಾ ಸಾಥ ನೀಡಿದರು. ಸಿಂಧು ನಾಯ್ಕ ಸ್ವಾಗತಿಸಿದರು. ಮನೋಹರ ವಿಶ್ವಕರ್ಮ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ. ಶೋಭಾದೇವಿ ಚಕ್ಕಿ ನಿರೂಪಿಸಿದರು. ಅಂಜನಾ ಭೋವಿ ವಾರ್ಷಿಕ ವರದಿ ವಾಚನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

