ಗುಲ್ಬರ್ಗಾ

ಅಪಘಾತ: ನಾಲ್ವರು ದುರ್ಮರಣ

Published On :

ಗುಲ್ಬರ್ಗ: ಹುಮ್ನಾಬಾದ್- ಬಿಜಾಪುರ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿರುವ ಭೀಕರ ರಸ್ತೆ ದುರಂತದಲ್ಲಿ ಅಫಜಲ್ಪೂರ ತಾಲೂಕಿನ ಘತ್ತರಗಿಯಲ್ಲಿರುವ ಭಾಗ್ಯವಂತಿದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣದ ಮುಡಬಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಸೇರಿದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಹೈದರಾಬಾದ್‌ನಿಂದ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ನವನಿಹಾಳ ಕ್ರಾಸ್ ಬಳಿ ರಸ್ತೆಯ ಎಡಗಡೆಯಲ್ಲಿ ತಮ್ಮ ಪಾಡಿಗೆ ತಾವು ಪಾದಯಾತ್ರೆಯಲ್ಲಿದ್ದ 10 ಭಕ್ತರ ತಂಡದ ಮೇಲೆಯೇ ಹರಿದಿದೆ. ನೋಡ ನೋಡುತ್ತಿದ್ದಂತೆಯೇ ತಂಡದ ಎಲ್ಲರೂ ರಕ್ತದ ಮಡುವಿನಲ್ಲಿ ಮುಳುಗಿದ್ದಾರೆ. ಉಳಿದವರು ಗಾಯಗೊಂಡಿದ್ದಾರೆ.

ಕಾಡಾನೆಗಳ ದಾಳಿ: ಬೆಳೆ ಹಾನಿ
ಶನಿವಾರಸಂತೆ: ಸಮೀಪದ ಎಳೆನೀರು ಗುಂಡಿಯ ಸುಬ್ಬಣ ,  ಅವರಿಗೆ ಸೇರಿದ ಎಳೆನೀರು ಗುಂಡಿ ಎಸ್ಟೇಟ್‌ನ ಕಾಫಿ, ಬಾಳೆ ಅಡಕೆತೋಟಕ್ಕೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಅಡಕೆ, ಬಾಳೆ ಗಿಡಗಳಿಗೆ ಹಾನಿಯಾಗಿವೆ.  ನಿಡ್ತ ಮೀಸಲು ಅರಣ್ಯದಿಂದ ಪ್ರತಿನಿತ್ಯ ಸಂಜೆ 6 ಗಂಟೆಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಇವರ ತೋಟದ ಮಧ್ಯೆ ನೀರಿನ ಕೆರೆ ಇರುವುದರಿಂದ ನೀರು ಕುಡಿಯಲು ಕಾಡಿನಿಂದ ಬರುತ್ತಿತ್ತು. ಇವರು ಬೆಳೆಸಿರುವ ಮರಗೆಣಸು ಸೇರದಂತೆ ಬಾಳೆ ಗಿಡ, ಕಾಫಿ, ಅಡಕೆಗಳನ್ನು ಹಾಳು ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.