ಗುಲ್ಬರ್ಗಾ

ಅಭಿವೃದ್ಧಿ ನೋಡಿ ಮತ ಹಾಕಿ'

Published On :

ಹುಣಸಗಿ: ಹುಣಸಗಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಮಾಜಿ ಸಚಿವ ರಾಜುಗೌಡ ಈ ಭಾಗದ ಅಬಿವೃದ್ಧಿಗೆ ಸಹಕರಿಸಿದ್ದಾರೆ. ನೀರಾವರಿಗೆ ಕೋಟ್ಯಂತರ ರು. ಅನುದಾನ ತಂದು ಕೃಷಿಕರಿಗೆ ಉತ್ತಮ ಸೌಲಭ್ಯ ಒದಗಿಸಿದ್ದಾರೆ. ಅವರ ಅಭಿವೃದ್ಧಿ ನೋಡಿ ಈ ಬಾರಿ ಜೆಡಿಎಸ್‌ಗೆ ಮತನೀಡಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಅಭಿವೃದ್ಧಿಯ ಖ್ಯಾತಿ ರಾಜುಗೌಡರಿಗೆ: ಹುಣಸಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು. ಹುಣಸಗಿಯನ್ನು ನೂತನ ತಾಲೂಕನ್ನಾಗಿ ಮಾಡುವುದರ ಜೊತೆಗೆ, ಕೊಳಚೆ ಮುಕ್ತ ಪಟ್ಟಣವಾಗಿ ಅಭಿವೃಧ್ಧಿ ಪಡಿಸಿದ್ದಾರೆ. ಪ್ರತಿಯೊಬ್ಬರ ಮನೆ ಬಾಗಿಲವರೆಗೆ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು, ಪಟ್ಣಣದ ಮಿತಿಯಲ್ಲಿ ಒಂದೂವರೆ ಕಿಮೀವರೆಗೆ ಡಬಲ್ ರಸ್ತೆ ನಿರ್ಮಾಣ, 110 ಕೆವಿ ವಿದ್ಯುತ್ ವಿತರಣಾ ಕೇಂದ್ರ, ಕೃಷಿ ಮಾರುಕಟ್ಟೆಯಲ್ಲಿ ರೈತ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕಾರಣ ಒಬ್ಬ ಮತದಾರ ಪ್ರಭು ನಿರೀಕ್ಷೆ ಮಾಡುವುದು ಸಕಲ ಮೂಲ ಸೌಲಭ್ಯ, ಅವುಗಳನ್ನು ನೀಡಿದ ಖ್ಯಾತಿ ರಾಜುಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.
ನೆಮ್ಮದಿ ಜೀವನಕ್ಕೆ ಕಾರಣ: ಬಸವರಾಜ ಸ್ಥಾವರಮಠ ಮಾತನಾಡಿ, ತಾಲೂಕಿನ ಸಮಸ್ತ ಜನ ಸಮುದಾಯ ನೆಮ್ಮದಿ ಸುಖ ಶಾಂತಿಯಿಂದ ಜೀವನ ಸಾಗಿಸುತ್ತಾ ಇದ್ದಾರೆ. ಇದಕ್ಕೆ ಕಾರಣ ನಮ್ಮ ರಾಜುಗೌಡರು ಎಂದರು.
ಜಿಪಂ ಸದಸ್ಯ ಎಚ್.ಸಿ.ಪಾಟೀಲ್, ತಾಲೂಕಿನ ಅಭಿವೃಧ್ಧಿಗೆ ರಾಜ್ಯದಲ್ಲಿಯೆ ಅತಿ ಹೆಚ್ಚು ಅನುದಾನ ತಂದ ಖ್ಯಾತಿಗೆ ಮಾಜಿ ಶಾಸಕ ರಾಜುಗೌಡರು ಮೊದಲಿಗರು. ಯಾರಿಗೂ ತೊಂದರೆ ಕೊಡದೆ, ಕೃಷಿ, ನೆಲ, ಜಲ, ಆರೋಗ್ಯ ರಕ್ಷಣೆಯಲ್ಲಿ ಕಂಕಣ ಬದ್ಧರಾಗಿ ದುಡಿಯುತ್ತಿರುವ ರಾಜುಗೌಡರು ತೆನೆ ಹೊತ್ತ ಮಹಿಳೆ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಗಮನಿಸಿ ಮತ ನೀಡಿ ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ನಾಗಣ್ಣ ದಂಡಿನ್, ನಿಂಗರಾಜ ಬಾಚಿಮಟ್ಟಿ, ವೀರೇಶ ಚಿಂಚೋಳಿ, ಮುರಿಗೆಣ್ಣ ದೇಸಾಯಿ, ಬಸ್ಸಣ್ಣ ದೇಸಾಯಿ, ಮುತ್ತು ಕೊಣ್ಣೂರು, ಮೆಹಬೂಬ ಬೆಣ್ಣೂರು, ಪಮ್ಮನಗೌಡ ಸದಬ, ರಾಮು ರಾಮನಗೌಡರ್, ಸೋಮನಗೌಡ ಪಾಟೀಲ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.