ವೈಜನಾಥ ಗೆಲವು ಖಚಿತ: ಮಲಕೂಡ
ಸೇಡಂ: ಸತತ ಹೋರಾಟದ ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಜನರಿಗಾಗಿ ಶ್ರಮವಹಿಸಿ ಈಗ ವಿಧಾನ ಸಭೆಯಲ್ಲಿ 371ಕಲಂ ಪ್ರತಿಧ್ವನಿಸಲು ಮುಂದಾಗಿರುವ ವೈಜನಾಥ ಪಾಟೀಲರ ಗೆಲವು ಖಚಿತ ಎಂದು ಮುಖಂಡ ನರೇಶ ಮಲಕೂಡ ತಿಳಿಸಿದರು.
ಮುಧೋಳ ಗ್ರಾಮದಲ್ಲಿ ನಡೆದ ಕೆಜೆಪಿ ಪ್ರಚಾರ ಸಭೆಯಲ್ಲಿ ಅಮಾತನಾಡಿ, ಸಂವಿಧಾನದ 371(ಜೆ) ಕಲಂ ಜಾರಿ ಮಾಡುವ ಮೂಲಕ ಹೈ.ಕ. ಭಾಗವನ್ನು ಅಭಿವೃದ್ಧಿಯತ್ತ ಒಯ್ಯಬೇಕೆಂಬ ಮಹದಾಸೆ ವೈಜನಾಥ ಪಾಟೀಲರದಾಗಿದ್ದು, ಅವರ ಕೈ ಬಲಪಡಿಸಲು ಕೆಜೆಪಿಗೆ ಮತ ನೀಡುವಂತೆ ಕೋರಿದರು.
ಕೆಜೆಪಿ ಸೇರ್ಪಡೆ: ಇದೇ ಸಂದರ್ಭದಲ್ಲಿ ಕೋಡ್ಲಾ, ಮುಷ್ಟಳ್ಳಿ, ನಾಚವಾರ, ಹುಳಗೋಳ, ಗುಂಡಳ್ಳಿಯಲ್ಲಿ ಪ್ರಮುಖ ಗ್ರಾಮದ ಮುಖಂಡರು ಕೆಜೆಪಿ ಸೇರ್ಪಡೆಗೊಂಡರು. ಭೀಮರೆಡ್ಡಿ ಜಿಲ್ಲೇಡಪಲ್ಲಿ ನಾಯಕತ್ವದಲ್ಲಿ ಮಾದೇಶ, ಕಿಷ್ಟಪ್ಪ ಗಡ್ಡಲ್, ಹಣಮಂತ ವಾಂದ್ವಾಲ್, ವೆಂಕಟೇಶ ಕೋನಿ, ನರಸಪ್ಪ ಫೀರಂಗಿ, ಸಾಯಪ್ಪ ನಾಡೇಪಲ್ಲಿ, ರಾಘವೇಂದ್ರ, ಅಶೋಕ, ನರಸಿಂಹಲು, ಭಗವಂತ, ಗೌಸ್, ಭೀಮರೆಡ್ಡಿ, ಸಾಯಿಕುಮಾರರೆಡ್ಡಿ, ಜಗನ್ನಾಥರೆಡ್ಡಿ, ಅನಂತರೆಡ್ಡಿ, ಪರಶುರಾಮರೆಡ್ಡಿ, ರವೀಂದ್ರ ತಳವಾರ, ಸಾಯಿರೆಡ್ಡಿ ಕೆಜೆಪಿ ಸೇರ್ಪಡೆಗೊಂಡರು.
ಮುಖಂಡ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಶರಣಭೂಪಾಲರೆಡ್ಡಿ ಪಾಟೀಲ್, ನಾಗಭೂಷಣರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

