371 ಕಲಂ 'ಕೈ' ಸಾಧನೆ: ಖರ್ಗೆ
ಡಾ. ಶರಣಪ್ರಕಾಶ ಪಾಟೀಲ್ ಪರ ಪ್ರಚಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸೇಡಂ ಏ.25
ಹೈ.ಕ. ಭಾಗದ ಬಹು ದಿನದ ಬೇಡಿಕೆ 371ಕಲಂ ತಿದ್ದುಪಡಿ ಕಾಂಗ್ರೆಸ್ ಸಾಧನೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ ರು.
ಇಲ್ಲಿನ ವಿವೇಕಾನಂದ ಶಾಲೆಯ ಆವರಣದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ ಪಾಟೀಲ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯವನ್ನು ಐದು ವರ್ಷವನ್ನಾಳಿದ ಬಿಜೆಪಿ ಸರ್ಕಾರ ಕೇವಲ ಭ್ರಷ್ಟಾಚಾರವೆಸಗುವಲ್ಲಿ ಕಾಲ ಕಳೆದಿದೆ ಎಂದು ಆರೋಪಿಸಿದರು.
ಅಭಿವೃದ್ಧಿಯೇ ನಮ್ಮ ಗುರಿ: ಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುವುದು ನಿಶ್ಚಿತ ಒಂದು ವೇಳೆ ಅದು ಆಗಿದ್ದೆಯಾದರೆ, ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ. ಹೈ.ಕ. ಭಾಗದ ಬಹುದಿನದ ಬೇಡಿಕೆಯಾಗಿದ್ದ 371ಕಲಂ ತಿದ್ದುಪಡಿ ತರಲು ಅಂದಿನ ಎನ್ಡಿಎ ಸರ್ಕಾರದ ಗೃಹ ಸಚಿವ ಎಲ್.ಕೆ. ಅಡ್ವಾಣಿ ಸುತರಾಮ ಒಪ್ಪಲಿಲ್ಲ. ಆಗ ವೈಜನಾಥ ಪಾಟೀಲರು ಎಲ್ಲಿ ಹೋಗಿದ್ದರು ಎಂದು ಖಾರವಾಗಿ ಪ್ರಶ್ನಿಸಿದ ಅವರು ಎಲ್ಲವು ಮೂಗಿದ ಮೇಲೆ ಬಂದು ನಾವು ಮಾಡಿದ್ದು ಎಂದರೆ ಹೇಗೆ ಎಂದರು.
ನಾವು ಕಾರಣ: 371ಕಲಂ ತಿದ್ದುಪಡಿಗೆ ಸೋನಿಯಾಗಾಂಧಿ, ರಾಹುಲ್ಗಾಂಧಿ, ಧರ್ಮಸಿಂಗ್, ನಾನು ಕಾರಣನಾಗಿದ್ದೇನೆ ಎಂದ ಅವರು ಇದರಿಂದ ಈ ಭಾಗದ ರೈತರಿಗೆ, ಯುವಕರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಗುಲ್ಬರ್ಗ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕ ಮತ್ತು ಲಾತೋರ ಶಾಸಕ ಅಮೀತ ವಿಲಾಸರಾವ ದೇಶಮುಖ, ಮಾಜಿ ಮುಖ್ಯಮಂತ್ರಿ ಬೀದರ್ ಸಂಸದ ಧರ್ಮಸಿಂಗ್, ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಜಮೀರ್ ಅಹ್ಮದ್ ಪಾಶಾ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಅಭ್ಯರ್ಥಿ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿದರು.
ಇಲಿಯಾಸ ಸೇಠ ಬಾಗವಾನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರಾವ ಮಾಲಿಪಾಟೀಲ್, ವೆಂಕಟರಾಮರೆಡ್ಡಿ ಕಡತಾಲ್, ಮಾಜಿ ಪುರಸಭೆ ಅಧ್ಯಕ್ಷೆ ಬಸಮ್ಮ ಪಾಟೀಲ್, ಬಸವಂತರೆಡ್ಡಿ ಪಾಟೀಲ್ ರೆಬ್ಬನಪಲ್ಲಿ, ಶ್ರೀನಿವಾಶ ದೇಶಪಾಂಡೆ ಆಡಕಿ, ಸಿದ್ದಣ್ಣಗೌಡ ಪಾಟೀಲ್ ಕೊಲಕುಂದಾ, ಸಿದ್ದಣ್ಣಗೌಡ ಪಾಟೀಲ್ ಹೊಸಳ್ಳಿ, ಚೆನ್ನಾರೆಡ್ಡಿ ಪಾಟೀಲ್ ಬೆನಕನಳ್ಳಿ, ವೀರಣ್ಣ ಸಾಹು ತಂಬಾಕೆ, ಮದುಸೂದನರೆಡ್ಡಿ ಪಾಟೀಲ್ ಮುಧೋಳ, ಮಾಣಿಕರೆಡ್ಡಿ ಪಾಟೀಲ್ ಬಟಗೇರಾ, ಮಹಾಂತಪ್ಪ ಸಂಗಾವಿ, ದೂಳಪ್ಪ ದೊಡ್ಡಮನಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

