ವ್ಯಾಪಕ ಜಾಗೃತಿಗೆ ಇಒ ಸೂಚನೆ
ಸುರಪುರ: ಇಲ್ಲಿಯ ತಾಪಂ ಸಭಾಂಗಣದಲ್ಲಿ ಇಒ ಪ್ಯಾರೆ ಮಹ್ಮದ್ ಕುತ್ಬುದ್ದೀನ್ ಅಧ್ಯಕ್ಷತೆಯಲ್ಲಿ ಮತದಾನ ಜಾಗೃತಿ ಸಭೆ ಜರುಗಿತು. ಎಲ್ಲ ಪ್ರಮುಖ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಯ ಸಹಭಾಗಿತ್ವ ಹಾಗೂ ಈಗಾಗಲೇ ಕೈಕೊಂಡ ಕಾರ್ಯಕ್ರಮಗಳ ಬಗ್ಗೆ ವರದಿ ಸಲ್ಲಿಸಿದರು.
ಈ ವೇಳೆ ಇಒ ಪ್ಯಾರೆ ಮಹ್ಮದ್ ಮಾತನಾಡಿ, ಪ್ರತಿ ಪಂಚಾಯಿತಿಗಳಲ್ಲಿ ಸಭೆ ಮಾಡಿ ಹಾಗೂ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳನ್ನು ಕರೆದುಕೊಂಡು ಅವರ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಲು ತಿಳಿಹೇಳಬೇಕು. ಗೋಡೆಬರೆಹ, ಬ್ಯಾನರ್ ಬರೆಸುವುದು, ರ್ಯಾಲಿ ಮತ್ತು ಕರಪತ್ರ ವಿತರಣೆ ಮಾಡಿ ಎಲ್ಲೆಡೆ ವ್ಯಾಪಕ ಜಾಗೃತಿ ಮಾಡಿ ಯಶಸ್ವಿ ಮತದಾನ ಆಗುವಂತೆ ಎಲ್ಲರು ಸಹಕರಿಸಬೇಕೆಂದು ಸೂಚಿಸಿದರು.
ವಿವಿಧ ಸ್ಪರ್ಧೆ: ತಾಲೂಕು ಮತದಾನ ಜಾಗೃತಿ ಸಮಿತಿ ಹಾಗೂ ಗ್ರಾಪಂ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಿ ಕಾರ್ಯನಿರ್ವಹಿಸಬೇಕು. ರಂಗೋಲಿ ಸ್ಪರ್ಧೆ ಮತ್ತು ಬೀದಿ ನಾಟಕಗಳ ಹಾಗೂ ಮೋಟಾರ್ ಬೈಕ್ ರ್ಯಾಲಿ ನಡೆಸುವಂತೆ ತಿಳಿಸಿದರು.
ಬಿಇಒ ಕೆಂಪರಂಗಯ್ಯ ಮಾತನಾಡಿ, ಎಲ್ಲ ಶಾಲೆಗಳಿಂದ ಪ್ರಭಾತ್ ಪೇರಿ ಮಾಡಿಸಲಾಗುವುದು ಮತ್ತು ಮಕ್ಕಳ ಮೂಲಕ ಪಾಲಕರಿಗೆ ಮತದಾನದ ಮಹತ್ವ ಬಗ್ಗೆ ಹೇಳಲು ತಿಳಸಲಾಗಿದೆ ಎಂದರು. ಸಿಡಿಪಿಒ ಥಾಮಸ್ ದೊಡ್ಡಮನಿ ಮಾತನಾಡಿ, ವಲಯ ಮಟ್ಟದಲ್ಲಿ ಮೇಲ್ವಿಚಾರಕರ ನೇತೃತ್ವದಲ್ಲಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿ ಹೇಳಿ ಕರಪತ್ರ ಹಾಗೂ ಬ್ಯಾನರ್ ವಿತರಿಸಲಾಗಿದೆ ಎಂದರು.
ಟಿಎಚ್ಒ ಡಾ. ನಾಯಕ ಮಾತನಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಪ್ರತಿ ಮನೆಮನೆಗೆ ಮತದಾನದ ಪ್ರಚಾರ ಕಾರ್ಯ ಮಾಡಲಾಗುವುದೆಂದರು. ಕೃಷಿ ಇಲಾಖೆ ಎಡಿ ಕೇಸರಸಿಂಗ್ ಹಜಾರೆ, ತಾಲೂಕಿನ ಎಲ್ಲ ಪಂಚಾಯಿತಿಗಳಿಂದ ಪಿಡಿಒ ಮತ್ತು ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

