ಗುಲ್ಬರ್ಗಾ

ಹೀರಾಪುರ; ಕೆಜೆಪಿ ಸೇರ್ಪಡೆ

Published On :

ಗುಲ್ಬರ್ಗ: ತಾಲೂಕಿನ ಹೀರಾಪುರ ಗ್ರಾಮದ ಅನೇಕ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕೆಜೆಪಿ ಸೇರ್ಪಡೆಯಾದರು. ಶ್ರೀವತ್ಸ ನಾಯಕಲ್, ಉಮೇಶ ಜೋಶಿ, ಪ್ರಶಾಂತ ಅಟ್ಟೂರ್, ಅನೀಲ್ ಕುಲಕರ್ಣಿ, ಶರಣು ಮಲ್ಲಾಪುರ, ವಿಠ್ಠಲ್, ಪ್ರಕಾಶ ಡಿ, ರಾಘವೇಂದ್ರ ಕೆ, ಮಲ್ಲಿಕಾರ್ಜುನ, ಕೃಷ್ಣ, ಸುರೇಶ ಇತರರು ಕೆಜೆಪಿ ಸೇರ್ಪಡೆಯಾಗಿದ್ದು, ಇವರನ್ನು ಪಕ್ಷದ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಎಸ್.ಕೆ. ಕಾಂತಾ, ಮುಖಂಡರಾದ ವೈಜನಾಥ ಝಳಕಿ, ಉಮಾಕಾಂತ ನಿಗ್ಗುಡಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಠ್ಠಲ್ ಸಾವಂತ, ಸುಧಾಕರ್ ಕಾಂಬಳೆ, ರಾಜಶೇಖರ, ಮಲ್ಲಿನಾಥ ಪಾಟೀಲ್, ರಾಜು, ಅಮೃತ ನಂದೂರ, ವಿಠ್ಠಲ್, ಅಶೋಕ ನೂಲಾ, ಆರ್.ಎನ್. ಭೂಶೆಟ್ಟಿ, ಪ್ರಭು ಹೊಸಮನಿ, ಸುಂದರಕರ್, ಆನಂದ ಹುಡಗಿ, ಶ್ರೀನಿವಾಸ ಕಾಡಾದಿ, ತುಕಾರಾಮ ಧುಂಪಾ, ಅಂಬಾರಾಯ ಡಿಗ್ಗಿಕರ್ ಅನೇಕರು ಇದ್ದರು.
ಅಕ್ರಮ ವಿರುದ್ಧ ಕ್ರಮ ಜರುಗಿಸಿ: ಡಿಸಿ
ಗುಲ್ಬರ್ಗ: ಚುನಾವಣೆಯ ಮತದಾನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಹಾಗೂ ಸ್ಪರ್ಧಿಸಿದ ಉಮೇದುವಾರರ ಪ್ರಚಾರ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿದ್ದು, ಫ್ಲಾಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ ಮತ್ತು ವಿಡಿಯೋ ವೀಕ್ಷಣಾ ತಂಡದಲ್ಲಿರುವ ಅಧಿಕಾರಿಗಳು ಈ ಕಾರ್ಯ ಚಟುವಟಿಕೆಗಳ ತೀವ್ರ ನಿಗಾವಹಿಸಬೇಕು. ಚುನಾವಣಾ ಅಕ್ರಮಗಳಿಗೆ ಯಾವುದೇ ಅವಕಾಶ ನೀಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.