ಗುಲ್ಬರ್ಗಾ

ಬೈಕ್ ಡಿಕ್ಕಿ: ಇಬ್ಬರ ಸಾವು

Published On :

ಗುಲ್ಬರ್ಗ: ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸರಡಗಿ ಕ್ರಾಸ್ ಬಳಿಯ ಫಿರೋಜಾಬಾದ್ ದರ್ಗಾ ಹತ್ತಿರ ಸೋಮವಾರ ಬೆಳಗಿನ ಜಾವ ನಡೆದಿದೆ.
ಗುಲ್ಬರ್ಗದ ಶಿವಾಜಿ ನಗರದ ರಮೇಶ ಸೋರಡೆ(35) ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತುಮ್ಮಿಹಾಳದ ರಮೇಶ ಅಲಿಯಾಸ್ ರಾಯಪ್ಪ ಅಂಗರಗಟ್ಟಿ(32) ಮೃತರು.
ಮೃತರಲ್ಲಿ ರಮೇಶ ಅಲಿಯಾಸ್ ರಾಮಪ್ಪ ಕೃಷಿಗೆ ಸಂಬಂಧಿಸಿದ ಪತ್ರಿಕೆಯೊಂದರ ಸಂಪಾದಕ ಎಂದು ತಿಳಿದು ಬಂದಿದೆ. ಇವರಿಬ್ಬರೂ ಜೇವರ್ಗಿಯಿಂದ ಗುಲ್ಬರ್ಗ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಸರಡಗಿ ಕ್ರಾಸ್ ಬಳಿಯ ಫಿರೋಜಾಬಾದ್ ದರ್ಗಾದ ಹತ್ತಿರ ರಸ್ತೆ ಬದಿಗೆ ನಿಲ್ಲಿಸಲಾಗಿದ್ದ ಲಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಡಿಎಸ್ಪಿ ಎ.ಡಿ. ಬಸಣ್ಣನವರ್, ಎಂ.ಬಿ. ನಗರ ಠಾಣೆಯ ಸಿಪಿಐ ಬಸವರಾಜ ತೇಲಿ, ಫರಹತಾಬಾದ್ ಪಿಎಸ್ಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಬೈಕ್ ಸವಾರ ಸಾವು
ಗುಲ್ಬರ್ಗ: ರಸ್ತೆ ಬದಿಯಲ್ಲಿ ಹಾಕಿರುವ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡ ಘಟನೆ ಕಮಲಾಪುರ ಬಳಿ ಸಂಭವಿಸಿದೆ.
ಗುಲ್ಬರ್ಗದ ವಸೀಮ್ ತಂದೆ ಅಕ್ರಮ್ ಮೃತನು. ವಸೀಮ್ ಮಹ್ಮದ್ ಹಾಜಿ ಜೊತೆಗೂಡಿ ದ್ವಿಚಕ್ರ ವಾಹನದ ಮೇಲೆ ಗುಲ್ಬರ್ಗದಿಂದ ಕಮಲಾಪುರಕ್ಕೆ ಹೋಗುತ್ತಿದ್ದಾಗ ವಸೀಮ್ನ ನಿರ್ಲಕ್ಷ್ಯದಿಂದ ರಸ್ತೆ ಬದಿಯ ಗಾರ್ಡ ಕಲ್ಲಿಗೆ ಡಿಕ್ಕಿ ಸಂಭವಿಸಿದ್ದು, ಇದರ ಪರಿಣಾಮ ವಸೀಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಹ್ಮದ್ ಹಾಜಿ ಗಾಯಗೊಂಡಿದ್ದು, ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.